ಪುರಿ ಜಗನ್ನಾಥ ದೇಗುಲ
ಪಿಟಿಐ ಚಿತ್ರ
ಪುರಿ: ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ರತ್ನಭಂಡಾರಕ್ಕೆ ವರ್ಗಾಯಿಸುವ ಪ್ರಕ್ರಿಯೆಯ ಹಿನ್ನೆಲೆ ಪುರಿ ಜಗನ್ನಾಥ ದೇಗುಲಕ್ಕೆ ಮಂಗಳವಾರ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಹಿಂದೆ ದುರಸ್ತಿ ಪಡಿಸಿದ್ದ ರತ್ನ ಬಂಢಾರಕ್ಕೆ ಬೆಲೆಬಾಳುವ ವಸ್ತುಗಳ ಸ್ಥಳಾಂತರ ಮಾಡಲಾಗುತ್ತಿದ್ದು, ದೇಗುಲದ ಆವರಣದಲ್ಲಿ ಹೊರಗಿನ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಈವರೆಗೆ ದೇವರಿಗೆ ಸಂಬಂಧಿಸಿದ ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಕೊಠಡಿಯಲ್ಲಿ ಇರಿಸಲಾಗಿತ್ತು ಎಂದು ಜಗನ್ನಾಥ ದೇಗುಲದ ಆಡಳಿತ ಮಂಡಳಿಯ ಮುಖ್ಯಸ್ಥ ಅರವಿಂದ ಪಧೀ ಹೇಳಿದ್ದಾರೆ.
ರತ್ನ ಬಂಢಾರ ಸಮಿತಿ ಸದಸ್ಯರು, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಬಿಸ್ವಾನಾಥ್ ರಥ, ಪುರಿ ಜಿಲ್ಲಾಧಿಕಾರಿ ದಿಬ್ಯಾ ಜ್ಯೋತಿ ಪರಿದಾ, ಎಸ್‌ಪಿ ಪ್ರತೀಕ್ ಸಿಂಗ್ ಮತ್ತು ಇತರರು ಉಪಸ್ಥಿತರಿರಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.