
ಪ್ರಯಾಗರಾಜ್ (ಉತ್ತರ ಪ್ರದೇಶ): ಮಾಘ ಮೇಳದ ಪುಷ್ಯ ಪೌರ್ಣಿಮೆಯಂದು ತ್ರಿವೇಣಿ ಸಂಗಮದಲ್ಲಿ 31 ಲಕ್ಷಕ್ಕೂ ಹೆಚ್ಚು ಭಕ್ತರು ತೀರ್ಥಸ್ನಾನ ಮಾಡಿದ್ದಾರೆ. 10–15 ಲಕ್ಷ ಭಕ್ತರು ತೀರ್ಥಸ್ನಾನ ಮಾಡಬಹುದೆಂದು ನಿರೀಕ್ಷಿಸಲಾಗಿತ್ತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಿಳಿಸಿದರು.
ಮಾಘ ಮೇಳದ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಆದಿತ್ಯನಾಥ್, ‘ಮಕರ ಸಂಕ್ರಾತಿ ಸಲುವಾಗಿ ಜನವರಿ 14–15, ಜ.18ರ ಮೌನಿ ಅಮಾವಾಸ್ಯೆ, ಜ. 23ರ ವಸಂತ ಪಂಚಮಿ, ಬಳಿಕ ಮಾಘ ಮೇಳ ಮತ್ತು ಫೆಬ್ರುವರಿ 15ರ ಮಹಾಶಿವರಾತ್ರಿಯವರೆಗೆ ತೀರ್ಥಸ್ನಾನ ಮುಂದುವರೆಯಲಿದೆ’ ಎಂದು ಹೇಳಿದರು.
ಎಲ್ಲಾ ಇಲಾಖೆಗಳು ಕಾರ್ಯಕ್ರಮದ ಸಲುವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಮಾಘ ಮೇಳಕ್ಕಾಗಿ ಈ ಬಾರಿ ನದಿಯ ದಡವನ್ನು ಹೆಚ್ಚಿಸಲಾಗಿದೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.