ADVERTISEMENT

ಇಂಡೋ–ಪೆಸಿಫಿಕ್‌ ವಲಯದಲ್ಲಿ ಶಾಂತಿ ಕಾಪಾಡಲು ಬದ್ಧ: ಕ್ವಾಡ್‌

‘ಕ್ವಾಡ್‌’ ಸದಸ್ಯ ರಾಷ್ಟ್ರಗಳ ಜಂಟಿ ಹೇಳಿಕೆ

ಪಿಟಿಐ
Published 31 ಡಿಸೆಂಬರ್ 2024, 13:02 IST
Last Updated 31 ಡಿಸೆಂಬರ್ 2024, 13:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಂಡೋ–ಪೆಸಿಫಿಕ್‌ ವಲಯವನ್ನು ಸ್ವತಂತ್ರ ಹಾಗೂ ಮುಕ್ತಗೊಳಿಸಿ, ಶಾಂತಿಯುತ ಹಾಗೂ ಸೌಹಾರ್ದ ವಾತಾವರಣವನ್ನು ಕಾಪಾಡಲು ಬದ್ಧವಿರುವುದಾಗಿ ‘ಕ್ವಾಡ್‌’ ಸದಸ್ಯ ರಾಷ್ಟ್ರಗಳು ಮಂಗಳವಾರ ಪುನರುಚ್ಚರಿಸಿವೆ.

ಕ್ವಾಡ್‌ ಸಹಕಾರ ಸಂಘಟನೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಕ್ವಾಡ್‌’ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಈ ಬಗ್ಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂಡೋ– ಪೆಸಿಫಿಕ್‌ ವಲಯದ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ‘ಕ್ವಾಡ್‌’ನ ಎಲ್ಲ ಸದಸ್ಯ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡುವುದಾಗಿ ಹಾಗೂ ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದಾಗಿಯೂ ಅವರು ಹೇಳಿದ್ದಾರೆ.

ಅಲ್ಲದೆ, ಆಸಿಯಾನ್‌ ಒಕ್ಕೂಟಕ್ಕೂ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಅಗತ್ಯ ಬೆಂಬಲ ನೀಡಲು ಬದ್ಧವಿರುವುದಾ‌ಗಿ ಒತ್ತಿ ಹೇಳಿದ್ದಾರೆ. 2004ರಲ್ಲಿ ‌ಹಿಂದೂ ಮಹಾಸಾಗರದಲ್ಲಿ ಸುನಾಮಿ ಉಂಟಾಗಿದ್ದಾಗ, ನಾಲ್ಕೂ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಜಂಟಿಯಾಗಿ ಹೋರಾಡಿದ್ದನ್ನೂ ಇದೇ ವೇಳೆ ಸ್ಮರಿಸಿಕೊಂಡಿದ್ದಾರೆ.

ADVERTISEMENT

ಇಂಡೋ– ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಕಾರಣ, ಕ್ವಾಡ್‌ ರಾಷ್ಟ್ರಗಳು ಈ ಒಗ್ಗಟ್ಟು ಪ್ರದರ್ಶಿಸುತ್ತಿವೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.