ADVERTISEMENT

ದೇಶದ ಯುವ ಸಮೂಹಕ್ಕೆ ಶಕ್ತಿ ತುಂಬಿದ ಕ್ವಿಟ್‌ ಇಂಡಿಯಾ ಚಳವಳಿ: ಪ್ರಧಾನಿ ಮೋದಿ

ಪಿಟಿಐ
Published 9 ಆಗಸ್ಟ್ 2021, 6:40 IST
Last Updated 9 ಆಗಸ್ಟ್ 2021, 6:40 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕ್ವಿಟ್‌ ಇಂಡಿಯಾ ಚಳವಳಿ (ಬ್ರಿಟಿಷರೇ ಭಾರತ ಬಿಟ್ಟು ತೊಲಗಿ) ಯಲ್ಲಿ ಪಾಲ್ಗೊಂಡ ಶ್ರೇಷ್ಠ ವ್ಯಕ್ತಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಗೌರವ ನಮನ ಸಲ್ಲಿಸಿದರು.

ಕ್ವಿಟ್‌ ಇಂಡಿಯಾ ಚಳವಳಿಯ 79ನೇ ವರ್ಷಾಚರಣೆ ಅಂಗವಾಗಿ ಟ್ವೀಟ್‌ ಮಾಡಿರುವ ಮೋದಿಯವರು, ‘ಈ ಚಳವಳಿ, ಭಾರತದಾದ್ಯಂತ ಪ್ರತಿಧ್ವನಿಸುವ ಜತೆಗೆ, ನಮ್ಮ ದೇಶದ ಯುವ ಸಮೂಹಕ್ಕೆ ಶಕ್ತಿ ತುಂಬಿದಂತಹ ಆಂದೋಲನ ಎಂದು ಅವರು ಬಣ್ಣಿಸಿದರು.

‘ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಶ್ರೇಷ್ಠರಿಗೆ ಗೌರವ ನಮನಗಳು. ಈ ಚಳವಳಿ ವಸಾಹತುಶಾಹಿ ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

ADVERTISEMENT

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‘ ಚಳವಳಿಯನ್ನು ಆರಂಭಿಸಲಾಯಿತು. ಐದು ವರ್ಷಗಳ ನಂತರ (ಆಗಸ್ಟ್ 15, 1947) ಭಾರತ, ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ, ಸ್ವತಂತ್ರ ದೇಶವಾಗುವಲ್ಲಿ ಈ ಆಂದೋಲನವು ಪ್ರಮುಖ ಪಾತ್ರ ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.