ADVERTISEMENT

ಜೈಲಿನಲ್ಲೇ ಕರೆಗೆ ಅವಕಾಶ: ಸಿಬಿಐಗೆ ನೋಟಿಸ್

ಪಿಟಿಐ
Published 18 ಮಾರ್ಚ್ 2019, 18:20 IST
Last Updated 18 ಮಾರ್ಚ್ 2019, 18:20 IST

ನವದೆಹಲಿ:ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದ ಮಧ್ಯವರ್ತಿ ಮಿಷೆಲ್‌ ಕ್ರಿಶ್ಚಿಯನ್‌ಗೆ ತಿಹಾರ್‌ ಜೈಲಿನಲ್ಲಿ ಅಂತರರಾಷ್ಟ್ರೀಯ ಕರೆ ಮಾಡಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಸಿಬಿಐ ಮತ್ತು ಮಿಷೆಲ್‌ಗೆ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ಬಂದೀಖಾನೆ ನಿಯಮಗಳನ್ನು ಉಲ್ಲಂಘಿಸಿ ಮಿಷೆಲ್‌ಗೆ ಅವಕಾಶ ನೀಡಲಾಗಿದೆ ಎಂದು ತಿಹಾರ್‌ ಜೈಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.

ವಾರಕ್ಕೆ 10 ನಿಮಿಷ ತನ್ನ ಮೂಲ ದೇಶಕ್ಕೆ ಕರೆ ಮಾಡಲು ಕೈದಿಗೆ ಅವಕಾಶ ನೀಡಲಾಗುತ್ತದೆ. ಆದರೆ, ಮಿಷೆಲ್‌ ವಾರಕ್ಕೆ 15 ನಿಮಿಷಕ್ಕೂ ಹೆಚ್ಚು ಕಾಲ ಕರೆ ಮಾಡಿ ಮಾತನಾಡಿದ್ದಾನೆ. ಅಲ್ಲದೆ, ತನ್ನ ಮೂಲ ದೇಶದ (ಇಂಗ್ಲೆಂಡ್‌) ಬದಲಿಗೆ ಇಟಲಿಗೆ ಕರೆ ಮಾಡಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸಿಬಿಐ ಮತ್ತು ಮಿಷೆಲ್‌ಗೆ ನೋಟಿಸ್‌ ಜಾರಿ ಮಾಡಿದ ನ್ಯಾಯಮೂರ್ತಿಗಳಾದ ಮುಕ್ತ ಗುಪ್ತಾ, ಏಪ್ರಿಲ್‌ 22ಕ್ಕೆ ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.