ADVERTISEMENT

ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 22:15 IST
Last Updated 28 ಫೆಬ್ರುವರಿ 2022, 22:15 IST
   

ನವದೆಹಲಿ (ಪಿಟಿಐ): ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ, ಉತ್ತರ ಪ್ರದೇಶದ ಡುಮರಿಯಾಗಂಜ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪ್ರತಾಪ್ ಸಿಂಗ್ ಅವರು ಚುನಾವಣಾ ಪ್ರಚಾರ ನಡೆಸುವುದನ್ನು ನಿರ್ಬಂಧಿಸಲಾಗಿದೆ.

ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘ನಮ್ಮ ವಿರೋಧಿ ಪಾಳಯಕ್ಕೆ ಮತಹಾಕುವ ಹಿಂದೂಗಳ ಮೈಯಲ್ಲಿ ಹರಿಯುವುದು ಮುಸ್ಲಿಮರ ರಕ್ತ’ ಎಂಬುದಾಗಿ ರಾಘವೇಂದ್ರ ಸಿಂಗ್ ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊ ಪರಿಶೀಲಿಸಿದ ಬಳಿಕ ಆಯೋಗ ಈ ಕ್ರಮ ತೆಗೆದುಕೊಂಡಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿವರಣೆ ನೀಡಲು ಕೊಟ್ಟಿರುವ ಸಮಯ ಸಾಕಾಗುವುದಿಲ್ಲ ಎಂದಿದ್ದ ಸಿಂಗ್‌ಗೆ ಹೆಚ್ಚುವರಿ ಸಮಯ ನೀಡಲು ಆಯೋಗ ನಿರಾಕರಿಸಿದೆ. ವಿಡಿಯೊದಲ್ಲಿ ತಾವು ಹೇಳಿದ ಪೂರ್ಣ ಮಾತು ದಾಖಲಾಗಿಲ್ಲ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.