ADVERTISEMENT

ಅತಿ ಹಿಂದುಳಿದವರ ಅಭ್ಯುದಯಕ್ಕೆ ಬದ್ಧ: ರಾಹುಲ್‌

ಪಿಟಿಐ
Published 25 ಸೆಪ್ಟೆಂಬರ್ 2025, 15:53 IST
Last Updated 25 ಸೆಪ್ಟೆಂಬರ್ 2025, 15:53 IST
<div class="paragraphs"><p>ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ</p></div>

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

   

ಕೃಪೆ: ಪಿಟಿಐ

ನವದೆಹಲಿ: ‘ಬಿಜೆಪಿ ಪದೇ–ಪದೇ ಸುಳ್ಳು ಹೇಳಿದರೂ, ವಾಸ್ತವದಿಂದ ಗಮನ ಬೇರೆಡೆ ಸೆಳೆದರೂ ಅತಿ ಹಿಂದುಳಿದವರು, ಹಿಂದುಳಿದವರು, ದಲಿತರು, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಅವರ ಹಕ್ಕುಗಳು ಪೂರ್ಣವಾಗಿ ದೊರೆಯುವಂತೆ ಮಾಡುವ ಮಹಾಮೈತ್ರಿಕೂಟದ ಬದ್ಧತೆಯನ್ನು ಕದಲಿಸಲಾಗದು’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಹೇಳಿದರು.

ADVERTISEMENT

ಈ ವರ್ಗದವರಿಗಾಗಿಯೇ ರೂಪಿಸಲಾದ ಕಾಂಗ್ರೆಸ್‌ನ 10 ಅಂಶಗಳಿರುವ ‘ಅತಿ ಹಿಂದುಳಿದವರಿಗೆ ನ್ಯಾಯ ಒದಗಿಸುವ ಸಂಕಲ್ಪ ಪತ್ರ’ ಹೆಸರಿನ ಪ್ರಣಾಳಿಕೆಯನ್ನು ರಾಹುಲ್‌ ಗಾಂಧಿ ಅವರು ಬುಧವಾರವಷ್ಟೇ ಬಿಡುಗಡೆ ಮಾಡಿದ್ದರು. ಈ ಕುರಿತು ಗುರುವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

‘ಬಿಹಾರದಲ್ಲಿರುವ ಹಿಂದುಳಿದ ವರ್ಗದ ಜನರಿಗೆ ಶಕ್ತಿ ತುಂಬಲು ಮತ್ತು ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನಮ್ಮ ಸಂಕಲ್ಪ ಪತ್ರದಲ್ಲಿ ಹಲವು ಭರವಸೆಗಳನ್ನು ನೀಡಿದ್ದೇವೆ. ಈ ವರ್ಗಗಳ ಅಭ್ಯುದಯಕ್ಕೆ ಶಿಕ್ಷಣವೇ ದಾರಿ. ಈ ವರ್ಗದ ಜನರು ಶಿಕ್ಷಣ ಪಡೆದುಕೊಳ್ಳುವಂತೆ ಮಾಡಲು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.