ಪಟ್ನಾ: ಬಿಹಾರದಲ್ಲಿ ನಡೆದ ‘ಮತದಾರರ ಅಧಿಕಾರ ಯಾತ್ರೆ’ ವೇಳೆ ದ್ವಿಚಕ್ರ ವಾಹನವನ್ನು ಕಳೆದುಕೊಂಡ ದರ್ಭಂಗಾದ ವ್ಯಕ್ತಿಯೊಬ್ಬರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ಮೋಟರ್ ಸೈಕಲ್ ಕೊಡಿಸಿದ್ದಾರೆ.
ರಾಹುಲ್ ಗಾಂಧಿ ಅವರೇ ಖುದ್ದು ಬೈಕ್ ಕೀ ಹಸ್ತಾಂತರಿಸುವ ವಿಡಿಯೊವನ್ನು ಪಕ್ಷದ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ಬೈಕ್ ಪಡೆದ ಶುಭಂ ಸೌರಭ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
‘ದರ್ಭಂಗಾದಲ್ಲಿ ನಡೆದ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಜೊತೆ ಪಾಲ್ಗೊಂಡಿದ್ದೆ. ನನ್ನ ಬೈಕ್ ಅನ್ನು ಭದ್ರತಾ ಪಡೆಗಳಿಗೆ ನೀಡಿದ್ದೆ. ನಂತರ ನನ್ನ ಬೈಕ್ ಕಳೆದುಹೋಗಿರುವುದು ಗೊತ್ತಾಯಿತು’ ಎಂದು ಸೌರಭ್ ತಿಳಿಸಿದ್ದಾರೆ.
‘ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಕರೆ ಮಾಡಿ, ರಾಹುಲ್ ಗಾಂಧಿ ಅವರು ಸೆ.1ರಂದು ಪಟ್ನಾದಲ್ಲಿ ಹೊಸ ಬೈಕ್ ನೀಡಲಿದ್ದಾರೆ ಎಂದು ದೂರವಾಣಿ ಕರೆ ಮಾಡಿ ತಿಳಿಸಿದರು. ಈ ವಿಷಯವನ್ನು ತಂದೆಗೂ ತಿಳಿಸಿದ್ದೆ. ನಾವಿಬ್ಬರೂ ಮೊದಲಿಗೆ ನಂಬಿರಲಿಲ್ಲ. ಆದರೂ ಪಟ್ನಾಕ್ಕೆ ತೆರಳಿ, ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಭಾಗಿಯಾಗಲು ನಿರ್ಧರಿಸಿದ್ದೆವು. ರಾಹುಲ್ ಅವರು ಗಾಂಧಿ ಮೈದಾನಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ನ ಕೀ ಹಸ್ತಾಂತರಿಸಿದರು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ಹೊಸ ಮೋಟರ್ ಸೈಕಲ್ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇದೇ ಮಾದರಿಯ ಬೈಕ್ ಅನ್ನು ಕಳೆದುಕೊಂಡಿದ್ದೆ. ಹಿರಿಯ ನಾಯಕರ ನಡೆಯಿಂದ ನಾನು ಭಾವುಕನಾಗಿದ್ದೇನೆ’ ಎಂದು ಸೌರಭ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.