ADVERTISEMENT

ತೈಲ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ಪಿಟಿಐ
Published 22 ಫೆಬ್ರುವರಿ 2021, 6:34 IST
Last Updated 22 ಫೆಬ್ರುವರಿ 2021, 6:34 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಏರುತ್ತಿರುವ ತೈಲ ಬೆಲೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ, ಈ ಸರ್ಕಾರ ಸಾಮಾನ್ಯ ಜನರ ಜೇಬು ಖಾಲಿ ಮಾಡಿಸಿ, ಉಚಿತವಾಗಿ ತಮ್ಮ ಸ್ನೇಹಿತರ ಜೇಬುಗಳನ್ನು ತುಂಬಿಸುತ್ತಿದೆ ಎಂದು ಆರೋಪಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಕೇಂದ್ರವು ಜನರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ‌ಈ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಸಾಮಾನ್ಯ ಜನರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದೆ.

#FuelLootByBJP ಹ್ಯಾಷ್‌ಟ್ಯಾಗ್‌ ಜತೆಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಪೆಟ್ರೋಲ್ ಬಂಕ್‌ನಲ್ಲಿ ನಿಮ್ಮ ಕಾರಿಗೆ ಇಂಧನ ತುಂಬಿಸುವ ವೇಳೆ ವೇಗವಾಗಿ ಚಲಿಸುವ ಮೀಟರ್ ಅನ್ನು ಗಮನಿಸಿದಾಗ, ಕಚ್ಚಾ ತೈಲ ದರಗಳು ಏರಿಕೆಯಾಗಿಲ್ಲ, ಇಳಿದಿವೆ ಎಂಬ ಅಂಶವನ್ನು ನೀವು ಗಮನಿಸಿರಬಹುದು‘ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ಪೆಟ್ರೋಲ್ ಬೆಲೆ ಲೀಟರ್‌ಗೆ ₹100. ಮೋದಿ ಸರ್ಕಾರ, ಜನರ ಜೇಬನ್ನು ಖಾಲಿ ಮಾಡಿ, ತಮ್ಮ ಸ್ನೇಹಿತರ ಜೇಬುಗಳನ್ನು ತುಂಬಿಸಲು ಬಹುದೊಡ್ಡ ಕೆಲಸಗಳನ್ನು ಮಾಡುತ್ತಿದೆ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.