ADVERTISEMENT

ಪೆಗಾಸಸ್‌ ಪ್ರಕರಣ: ವಿರೋಧ ಪಕ್ಷಗಳ ಮುಖಂಡರು, ಸಂಸದರ ಸಭೆ ನಾಳೆ

ಪಿಟಿಐ
Published 2 ಆಗಸ್ಟ್ 2021, 11:07 IST
Last Updated 2 ಆಗಸ್ಟ್ 2021, 11:07 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣ ವಿರುದ್ಧ ಕೈಗೊಳ್ಳಬೇಕಾದ ಹೋರಾಟ ಕುರಿತು ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಮಂಗಳವಾರಬೆಳಿಗ್ಗೆ ಪ್ರತಿಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದಾರೆ.

ಪ್ರಕರಣ ಕುರಿತು ಸರ್ಕಾರದ ಹೇಳಿಕೆ ಹಿಂದೆಯೇ ಮುಖಂಡರ ಸಭೆ ಕರೆಯಲಾಗಿದೆ. ಹೋರಾಟ ಕುರಿತಂತೆ ವಿರೋಧಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದು ಈ ಸಭೆಯ ಉದ್ದೇಶ ಎನ್ನಲಾಗಿದೆ. ವಿರೋಧಪಕ್ಷಗಳ ಸಂಸದೀಯ ಪಕ್ಷದ ನಾಯಕರು ಹಾಗೂ ವಿರೋಧಪಕ್ಷಗಳ ಎಲ್ಲ ಸಂಸದರಿಗೂ ಆಹ್ವಾನ ಕಳುಹಿಸಲಾಗಿದೆ.

ಪೆಗಾಸಸ್ ಗೂಢಚರ್ಯೆ ಕುರಿತು ಚರ್ಚೆಗೆ ಒತ್ತಾಯಿಸಿ, ವಿರೋಧಪಕ್ಷಗಳು ನಿತ್ಯ ನಿಲುವಳಿ ಸೂಚನೆಯನ್ನು ಕಳುಹಿಸುತ್ತಿವೆ. ಮಾಹಿತಿ ತಂತ್ರಜ್ಞಾನ ಸಚಿವರು ಈಗಾಗಲೇ ಹೇಳಿಕೆ ನೀಡಿದ್ದು ಚರ್ಚೆ ಅನಗತ್ಯ ಎಂದು ಸರ್ಕಾರ ಪ್ರತಿಪಾದಿಸಿದೆ.

ADVERTISEMENT

ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೂ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್‌ಗಾಂಧಿ ಅವರು ಕರೆದಿರುವ ಸಭೆಗಳಿಗೆ ಈವರೆಗೆ ತೃಣಮೂಲ ಕಾಂಗ್ರೆಸ್ ಗೈರುಹಾಜರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.