ADVERTISEMENT

ಫೋನ್ ಕದ್ದಾಲಿಸುತ್ತಿದ್ದರೆ, ತನಿಖೆಗೆ ಒಪ್ಪಿಸಲಿ: ರಾಹುಲ್ ಗಾಂಧಿಗೆ ಬಿಜೆಪಿ ಸವಾಲು

ಪಿಟಿಐ
Published 23 ಜುಲೈ 2021, 11:42 IST
Last Updated 23 ಜುಲೈ 2021, 11:42 IST
ರಾಜವರ್ಧನ್ ರಾಥೋಡ್
ರಾಜವರ್ಧನ್ ರಾಥೋಡ್   

ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾರ ದೂರವಾಣಿಯನ್ನೂ ಅಕ್ರಮವಾಗಿ ಕದ್ದಾಲಿಸುತ್ತಿಲ್ಲ, ಒಂದೊಮ್ಮೆ ರಾಹುಲ್ ಗಾಂಧಿಯವರಿಗೆ ತಮ್ಮ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂದು ಅನ್ನಿಸಿದರೆ, ತಮ್ಮ ದೂರವಾಣಿಯನ್ನು ತನಿಖೆಗೆ ಒಪ್ಪಿಸಲಿ‘ ಎಂದು ಬಿಜೆಪಿ ವಕ್ತಾರ ರಾಜವರ್ಧನ್ ರಾಥೋಡ್ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿಯವರಿಗೆ ದೂರವಾಣಿಯನ್ನು ತನಿಖಾ ಸಂಸ್ಥೆಗೆ ಒಪ್ಪಿಸಿದರೆ ಐಪಿಸಿ ಸೆಕ್ಷನ್ ಪ್ರಕಾರ ತನಿಖೆ ನಡೆಯಲಿದೆ‘ ಎಂದು ಹೇಳಿದರು.

ದೇಶದ ಅಭಿವೃದ್ಧಿಯನ್ನು ಒಪ್ಪಿಕೊಳ್ಳಲುಕಾಂಗ್ರೆಸ್ ತಯಾರಿಲ್ಲ. ಯಾವುದೋ ಒಂದು ನೆಪವನ್ನಿಟ್ಟುಕೊಂಡು ಸಂಸತ್ತಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದೆ‘ ಎಂದು ಅವರು ಆರೋಪಿಸಿದರು.

ADVERTISEMENT

ರಾಹುಲ್ ಗಾಂಧಿಯವರು ತಮ್ಮ ದೂರವಾಣಿಯನ್ನೂ ಕದ್ದಾಲಿಸಲಾಗುತ್ತಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ರಾಜವರ್ಧನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.