ADVERTISEMENT

ಹೊಗಳಿದರೂ ‘ಅವರು’ ನಿಮ್ಮೊಂದಿಗೆ ಇಲ್ಲ, ನಾನು ಜತೆಗಿರುವೆ: ಮಾಧ್ಯಮಗಳಿಗೆ ರಾಗಾ ಅಭಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2021, 8:53 IST
Last Updated 19 ಡಿಸೆಂಬರ್ 2021, 8:53 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ    

ನವದೆಹಲಿ: ‘ಅನೇಕ ಮಾಧ್ಯಮ ಸಹಚರರು ಕೇವಲ ಒಬ್ಬ ವ್ಯಕ್ತಿಯ ಮುಖವನ್ನು ತೋರಿಸುತ್ತಿದ್ದಾರೆ, ಆದರೆ, ಆ ವ್ಯಕ್ತಿ ಎಂದಾದರೂ ನಿಮ್ಮ ಪರವಾಗಿ ಒಂದು ಸಾರಿಯಾದರೂ ಮಾತನಾಡಿದ್ದಾರೆಯೇ?’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಪತ್ರಕರ್ತರಿಗೆ ಕೆಲಸ ಮಾಡಲು ಭಾರತ ಅಪಾಯಕಾರಿ ದೇಶ ಎಂಬ ವರದಿಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರುಮಾಧ್ಯಮಗಳ ಕಿವಿ ಹಿಂಡಿದ್ದಾರೆ.

‘ಭಾರತದಲ್ಲಿ ಅನೇಕ ಮಾಧ್ಯಮಗಳು ಒಬ್ಬ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿಕೊಂಡಿವೆ. ಭಿನ್ನ ಧ್ವನಿಯನ್ನು ಹತ್ತಿಕ್ಕುತ್ತಿದ್ದಾರೆ. ಅದನ್ನು ಸಾರ್ವಜನಿಕರಿಗೆ ತಲುಪಲು ಬಿಡುತ್ತಿಲ್ಲ. ಆದರೆ, ಆ ಒಬ್ಬ ವ್ಯಕ್ತಿ ಎಂದಾದರೂ ನಿಮ್ಮ ಪರವಾಗಿ ಬಂದಿದ್ದಾರೆಯೇ? ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಯವರ ಕುರಿತು ಮಾತನಾಡಿದ್ದಾರೆ.

ADVERTISEMENT

‘ನಿಮಗೆ ಸರಿ ಅನಿಸಿದ್ದನ್ನು ಮಾಡಿ. ಆದರೆ ನೆನಪಿರಲಿ, ನಿಮ್ಮ ಮೇಲೆ ಅನ್ಯಾಯ, ಹಿಂಸಾಚಾರ ನಡೆದರೆ ನಾನು ನಿಮ್ಮ ಜೊತೆ ಇರುತ್ತೇನೆ. ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೇನೆ’ ಎಂದು ರಾಹುಲ್ ಗಾಂಧಿ ಭಾನುವಾರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.