ADVERTISEMENT

ಕೇರಳ: ಧ್ವಂಸಗೊಂಡ‌ ಕಚೇರಿಗೆ ಭೇಟಿ ನೀಡಿದ ರಾಹುಲ್‌ ಗಾಂಧಿ

ಪಿಟಿಐ
Published 1 ಜುಲೈ 2022, 14:09 IST
Last Updated 1 ಜುಲೈ 2022, 14:09 IST
ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಕೇರಳಕ್ಕೆ ಆಗಮಿಸಿದ ರಾಹುಲ್‌ ಗಾಂಧಿ
ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಕೇರಳಕ್ಕೆ ಆಗಮಿಸಿದ ರಾಹುಲ್‌ ಗಾಂಧಿ   

ವಯನಾಡ್‌: ಆಡಳಿತಾರೂಢ ಸಿಪಿಐ (ಎಮ್‌) ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಬಫರ್‌ ಜೋನ್‌ ವಿಚಾರವಾಗಿ ತಮ್ಮ ಸಂಸದ ಕಚೇರಿಯನ್ನು ಧ್ವಂಸಗೊಳಿಸಿರುವುದನ್ನು ಬೇಜವಾಬ್ದಾರಿ ವರ್ತನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‌‌ಅವರು ಶುಕ್ರವಾರ ಹೇಳಿದರು.

ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಮೂರು ದಿನಗಳ ಭೇಟಿಗಾಗಿ ತಮ್ಮ ಕ್ಷೇತ್ರಕ್ಕೆ ಆಗಮಿಸಿರುವ ರಾಹುಲ್‌, ತಮ್ಮ ಕಚೇರಿಗೆ ಭೇಟಿ ನೀಡಿ, ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದರು. ಬಳಿಕ, ‘ಇದು ವಯನಾಡ್‌ ಜನರ ಕಚೇರಿ. ಆದರೆ ಎಡಪಂಥೀಯ ಸಂಘಟನೆಗಳ ವಿದ್ಯಾರ್ಥಿಗಳಿಂದ ಆಗಿರುವ ಪ್ರಮಾದ ದುರದೃಷ್ಟಕರ’ ಎಂದರು.

‘ಹಿಂಸೆ ಯಾವುದೇ ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ‌. ಆದ್ದರಿಂದ ನನಗೆ ಆ ವಿದ್ಯಾರ್ಥಿಗಳ ಮೇಲೆ ಯಾವುದೇ ಕೋಪ ಅಥವಾ ದ್ವೇಷ ಇಲ್ಲ’ ಎಂದು ಅವರು ಹೇಳಿದರು.‌

ADVERTISEMENT

ಅಲ್ಲದೇ ತಮ್ಮ ಕಚೇರಿಯ ಮೇಲೆ ದಾಳಿ ಮಾಡಿದವರನ್ನು ಮಕ್ಕಳು ಎಂದೂ ಕರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.