ADVERTISEMENT

10,000 ಕೋಟಿ ಡಾಲರ್ ದಾಟಿದ ಭಾರತ-ಚೀನಾ ವ್ಯಾಪಾರ: ರಾಹುಲ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2021, 11:06 IST
Last Updated 29 ಡಿಸೆಂಬರ್ 2021, 11:06 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಮಿಲಿಟರಿ ಸಂಘರ್ಷದ ನಡುವೆಯೂ ಭಾರತ ಹಾಗೂ ಚೀನಾ ದೇಶಗಳ ನಡುವಣ ವ್ಯಾಪಾರವು 10 ಸಾವಿರ ಕೋಟಿ ಡಾಲರ್ ದಾಟಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಶ್ನಿಸಿದ್ದಾರೆ.

'ಇದೊಂದು ಸುಳ್ಳುಗಳನ್ನು ಹೇಳುವ ವಾಕ್ಚಾತುರ್ಯದ ಸರ್ಕಾರವಾಗಿದೆ. ಇವರು ಗಂಟುಮೂಟೆ ಕಟ್ಟುವುದನ್ನು ದೇಶವು ಎದುರುನೋಡುತ್ತಿದೆ' ಎಂದು ರಾಹುಲ್ ವಾಗ್ದಾಳಿ ಮಾಡಿದ್ದಾರೆ.

ಗಡಿಯಲ್ಲಿ ಚೀನಾದೊಂದಿಗಿನ ಸಂಘರ್ಷದ ಬಳಿಕ ಆಂತರಿಕ ಭದ್ರತೆಯ ಹಿನ್ನೆಲೆಯಲ್ಲಿ ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.

ಈ ನಡುವೆ ಚೀನಾದೊಂದಿಗಿನ ವ್ಯಾಪಾರ ವಹಿವಾಟು 10,000 ಕೋಟಿ ಡಾಲರ್ ಕ್ರಮಿಸಿರುವುದಾಗಿ ಚೀನಾ ಜನರಲ್ ಆಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಡೇಟಾವನ್ನು ಉಲ್ಲೇಖಿಸಿ 'ದಿ ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.

ಚೀನಾದೊಂದಿಗಿನ ವ್ಯಾಪಾರವನ್ನು ಹೆಚ್ಚು ಅವಲಂಬಿಸಬಾರದು, ಬಹಿಷ್ಕರಿಸಬೇಕು ಎಂದು ಹೇಳುವ ಸರ್ಕಾರವೇ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದನ್ನು ರಾಹುಲ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.