ADVERTISEMENT

ರೈಲ್ವೆ: ದಿನಕ್ಕೆ 19 ಕಿ.ಮೀ. ಹೊಸ ಹಳಿ ನಿರ್ಮಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 14:57 IST
Last Updated 8 ಮಾರ್ಚ್ 2023, 14:57 IST
.
.   

ನವದೆಹಲಿ: ಭಾರತೀಯ ರೈಲ್ವೆಯು 2023-24ರಲ್ಲಿ ದಿನಕ್ಕೆ 19 ಕಿಲೋಮೀಟರ್‌ನಷ್ಟು ಹೊಸ ಹಳಿಯನ್ನು ನಿರ್ಮಿಸುವ ಗುರಿ ಹೊಂದಿದೆ. 2022–23ರಲ್ಲಿ ದಿನಕ್ಕೆ 12 ಕಿ.ಮೀ.ನಷ್ಟು ಹೊಸ ಹಳಿ ನಿರ್ಮಿಸಲಾಗಿತ್ತು.

2023–24ರ ಹಣಕಾಸು ವರ್ಷದಲ್ಲಿ ರೈಲ್ವೆಗೆ ₹ 2.41 ಲಕ್ಷ ಕೋಟಿಯಷ್ಟು ಹಣವನ್ನು ಮೀಸಲಿಡಲಾಗಿದ್ದು, 7,000 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಿಸಲು ಯೋಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 4,500 ಕಿ.ಮೀ.ಉದ್ದದ ಮಾರ್ಗವನ್ನು ನಿರ್ಮಾಣ ಮಾಡಲಾಗಿತ್ತು.

‘ಹೊಸ ಹಳಿ ನಿರ್ಮಿಸುವ ಯೋಜನೆಯು ಗೇಜ್‌ ಪರಿವರ್ತನೆ ಹಾಗೂ ಜೋಡುಮಾರ್ಗಗಳನ್ನು ಒಳಗೊಂಡಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘2014ಕ್ಕಿಂತಲೂ ಮುಂಚೆ ದಿನಕ್ಕೆ 4 ಕಿ.ಮೀ. ಉದ್ದದಷ್ಟು ಹಳಿ ನಿರ್ಮಿಸಲಾಗುತ್ತಿತ್ತು’ ಎಂದು ಅವರು ಹೇಳಿದರು.

ಮುಂಬರುವ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಸಾಗಣೆಗೆ ಸಂಬಂಧಿಸಿದಂತೆ 100 ಮಹತ್ವದ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.