ADVERTISEMENT

ತಮಿಳುನಾಡಿನಲ್ಲೂ ದಾಳಿ

ಪಿಟಿಐ
Published 12 ಏಪ್ರಿಲ್ 2019, 20:10 IST
Last Updated 12 ಏಪ್ರಿಲ್ 2019, 20:10 IST

ಚೆನ್ನೈ:ಮತದಾರರಿಗೆ ಹಂಚುವ ಉದ್ದೇಶದಿಂದ ಅಕ್ರಮವಾಗಿ ಹಣ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿಯ ಮೇರೆಗೆ ತಮಿಳುನಾಡಿನ ಹಲವು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಚೆನ್ನೈ, ನಮಕ್ಕಳ್‌ ಮತ್ತು ತಿರುನಲ್ವೇಲಿಯ 18 ಕಡೆಗಳಲ್ಲಿ ಶುಕ್ರವಾರ ಬೆಳಗಿನ ಜಾವದಿಂದಲೇ ದಾಳಿ ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ದಾಖಲೆಯಿಲ್ಲದ ಹಣ ಇದೆ ಎಂಬ ಆರೋಪದ ಮೇರೆಗೆ ಪಿಎಸ್‌ಕೆ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ ಕಂಪನಿಯ ಕಚೇರಿಯಲ್ಲಿ ಅಧಿಕಾರಿಗಳು ಶೋಧ ನಡೆಸಿದರು.

ADVERTISEMENT

ಚುನಾವಣಾ ಉದ್ದೇಶಕ್ಕೆ ಹಣ ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಲವು ಲೇವಾದೇವಿಗಾರರ ಮನೆ ಮೇಲೆಯೂ ದಾಳಿ ನಡೆಸಲಾಯಿತು. ಉದ್ಯಮಿಗಳಾದ ಆಕಾಶ ಭಾಸ್ಕರನ್‌ ಮತ್ತು ಸುಜಯ್‌ ರೆಡ್ಡಿ ಎಂಬುವರ ಮನೆಯಲ್ಲಿಯೂ ಪರಿಶೀಲನೆ ನಡೆಸಲಾಯಿತು ಎಂದು ಐ.ಟಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೆಯ ಹಂತದಲ್ಲಿ ತಮಿಳುನಾಡಿನ 39 ಕ್ಷೇತ್ರ ಮತ್ತು ಪುದುಚೇರಿಯ ಒಂದು ಕ್ಷೇತ್ರದಲ್ಲಿ ಏಪ್ರಿಲ್‌ 18ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.