ಜೈಪುರ: ಹವಾಮಾನ ವೈಪರೀತ್ಯದಿಂದ, ಮುಂದಿನ ನಾಲ್ಕೈದು ದಿನಗಳ ಕಾಲ, ರಾಜಸ್ಥಾನದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ಇಂದು ತಿಳಿಸಿದರು.
ರಾಜಸ್ಥಾನದ ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಬಿಸಿಗಾಳಿಯ ಹೊಡೆತದಿಂದ ತತ್ತರಿಸಿದ್ದ ರಾಜಸ್ಥಾನಿಯರಿಗೆ ಇದು ಅನುಕೂಲ ಉಂಟುಮಾಡಲಿದೆ.
ಪಶ್ಚಿಮದಿಂದ ಬರುತ್ತಿರುವ ಚಂಡಮಾರುತದ ಪರಿಣಾಮ ಪಾಕಿಸ್ತಾನ, ಪಂಜಾಬ್ ಸೇರಿದಂತೆ ರಾಜಸ್ಥಾನದ ವಾಯವ್ಯ ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಚಂಡಮಾರುತವು ಗಂಟೆಗೆ 50ರಿಂದ 60ಕೀಮಿ ವೇಗದಲ್ಲಿ ಬರುತ್ತಿದ್ದು, ರಾಜಸ್ಥಾನದ ಜೋದ್‌ಪುರ, ಉದಯಪುರ, ಕೋಟ, ಜೈಪುರ, ಭರತ್‌ಪುರ್ ಹಾಗೂ ಅಜ್ಮೈರ್ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.