ADVERTISEMENT

ಬಂಗಾಳ: ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ, ಐತಿಹಾಸಿಕ ಕ್ಷಣ ಎಂದು ಬಣ್ಣನೆ

ಪಿಟಿಐ
Published 29 ಮಾರ್ಚ್ 2023, 11:19 IST
Last Updated 29 ಮಾರ್ಚ್ 2023, 11:19 IST
ಕೋಲ್ಕತ್ತದಲ್ಲಿರುವ ರಾಜ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದಿಸಿದರು. ಈ ಸಂದರ್ಭ ಪ.ಬಂಗಾಳ ರಾಜ್ಯಪಾಲ ಆನಂದ ಬೋಸ್ ಇದ್ದರು.
ಕೋಲ್ಕತ್ತದಲ್ಲಿರುವ ರಾಜ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದಿಸಿದರು. ಈ ಸಂದರ್ಭ ಪ.ಬಂಗಾಳ ರಾಜ್ಯಪಾಲ ಆನಂದ ಬೋಸ್ ಇದ್ದರು.   

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲರಿರುವ ರಾಜಭವನಕ್ಕೆ ಜನಸಾಮಾನ್ಯರೂ ಕೂಡ ಭೇಟಿ ನೀಡಬಹುದೆಂದು ನಿರ್ಧರಿಸಲಾಗಿದ್ದು, ಇದೊಂದು ಐತಿಹಾಸಿಕ ಕ್ಷಣವೆಂದು ಇಲ್ಲಿನ ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದರು.

ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜಭವನದ ಬಾಗಿಲಿನ ಕೀಲಿಯನ್ನು ಹಸ್ತಾಂತರಿಸಿದರು. ಬಾಗಿಲು ತೆರೆದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಯಾಗಿ ರಾಷ್ಟ್ರಪತಿ ಅವರು ರಾಜಭವನ ಪ್ರವೇಶಿಸುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

’ರಾಜಭವನವು ವಸಾಹತುಶಾಹಿಗಳ ಪರಿಕಲ್ಪನೆಯಂತೆ ವಿಶೇಷ ಅಧಿಕಾರದ ಸ್ಥಾನವಾಗಿರದೆ, ಇನ್ನು ಮುಂದೆ ಜನಸಾಮಾನ್ಯರ ರಾಜಭವನವಾಗಲಿದೆ’ ಎಂದು ರಾಜ್ಯಪಾಲ ಬೋಸ್ ಹೇಳಿದ್ದಾರೆ.

ADVERTISEMENT

ರಾಜಭವನಕ್ಕೆ ಸಾರ್ವಜನಿಕರ ಭೇಟಿಯ ಸಮಯವನ್ನು ಇನ್ನೂ ನಿಗದಿಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.