ADVERTISEMENT

‘ರಾಜ ಭವನ’ ಇನ್ನು ಮುಂದೆ ‘ಲೋಕ ಭವನ’: ಹೆಸರು ಬದಲಾವಣೆ ಮಾಡಿದ್ದೇಕೆ ಗೊತ್ತಾ ?

ಪಿಟಿಐ
Published 1 ಡಿಸೆಂಬರ್ 2025, 14:11 IST
Last Updated 1 ಡಿಸೆಂಬರ್ 2025, 14:11 IST
   

ತಿರುವನಂತಪುರ/ಚೆನ್ನೈ: ಕೇರಳ ಮತ್ತು ತಮಿಳುನಾಡಿನ ‘ರಾಜಭವನ’ವನ್ನು ‘ಲೋಕಭವನ’ ಎಂದು ಸೋಮವಾರ ಅಧಿಕೃತವಾಗಿ ಮರುನಾಮಕರಣ ಮಾಡಲಾಯಿತು.

ದೇಶದ ಎಲ್ಲ ರಾಜಭವನಗಳನ್ನು ಲೋಕಭವನ ಹಾಗೂ ರಾಜ್ಯ‍ನಿವಾಸವನ್ನು ‘ಲೋಕನಿವಾಸ’ (ಲೆಫ್ಟಿನೆಂಟ್‌ ಗವರ್ನರ್ ಅಧಿಕೃತ ನಿವಾಸ) ಎಂದು ಮರುನಾಮಕರಣ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನೀಡಿರುವ ನಿರ್ದೇಶನದಂತೆ ಹೆಸರು ಬದಲಾವಣೆ ಮಾಡಲಾಗಿದೆ.

‘ಹೆಸರು ಬದಲಾವಣೆ ಪ್ರಕ್ರಿಯೆಯು ವಸಾಹತುಶಾಹಿ ಮನಸ್ಥಿತಿಯಿಂದ ಪ್ರಜಾಪ್ರಭುತ್ವ ಚಿಂತನೆಗಳ ಕಡೆಗಿನ ಪಯಣದಲ್ಲಿ ಮಹತ್ವದ ಮೈಲುಗಲ್ಲು ಆಗಿದೆ’ ಎಂದು ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರ್ಲೇಕರ್ ಅವರು ತಿಳಿಸಿದ್ದಾರೆ. 

ADVERTISEMENT

‘ಮರುನಾಮಕರಣದ ಮೂಲಕ ಜನಕೇಂದ್ರಿತ ಆಡಳಿತ ಮತ್ತು ಸಾರ್ವಜನಿಕ ಸಹಭಾಗಿತ್ವದ ಬದ್ಧತೆಯನ್ನು ಮುಂದುವರಿಸಲಾಗುತ್ತದೆ’ ಎಂದು ತಮಿಳುನಾಡು ರಾಜ್ಯಪಾಲರ ಕಚೇರಿ ತಿಳಿಸಿದೆ.

ರಾಜಭವನವನ್ನು ಲೋಕಭವನ ಎಂದು ನಾಮಕರಣ ಮಾಡುವ ಬಗ್ಗೆ 2022ರಲ್ಲಿ ನಡೆದ ಅಖಿಲ ಭಾರತ ರಾಜ್ಯಪಾಲರ ಸಮಾವೇಶದಲ್ಲಿ ಅರ್ಲೇಕರ್ ಮೊದಲ ಬಾರಿಗೆ ಪ್ರಸ್ತಾಪ ಮಾಡಿದ್ದರು. ಆಗ ಅವರು ಬಿಹಾರ ರಾಜ್ಯಪಾಲರಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.