ADVERTISEMENT

ಥಾಣೆ ರ್‍ಯಾಲಿಯಲ್ಲಿ ಕತ್ತಿ ಹಿಡಿದಿದ್ದ ರಾಜ್ ಠಾಕ್ರೆ ಸೇರಿ ಮೂವರ ವಿರುದ್ಧ ಕೇಸ್

ಪಿಟಿಐ
Published 13 ಏಪ್ರಿಲ್ 2022, 13:18 IST
Last Updated 13 ಏಪ್ರಿಲ್ 2022, 13:18 IST
ರಾಜ್ ಠಾಕ್ರೆ: ಪಿಟಿಐ ಚಿತ್ರ
ರಾಜ್ ಠಾಕ್ರೆ: ಪಿಟಿಐ ಚಿತ್ರ   

ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಸಾರ್ವಜನಿಕ ರ್‍ಯಾಲಿಯಲ್ಲಿ ಕತ್ತಿ ಹಿಡಿದ ಆರೋಪದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 4 ಮತ್ತು 25 ರ ಅಡಿಯಲ್ಲಿ ಠಾಕ್ರೆ ಮತ್ತು ಎಂಎನ್‌ಎಸ್‌ನ ಪಾಲ್ಘರ್ ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ್ ಜಾಧವ್ ಹಾಗೂ ಥಾಣೆ ನಗರ ಘಟಕದ ಅಧ್ಯಕ್ಷ ರವೀಂದ್ರ ಮೋರೆ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಗಡ್ಕರಿ ಚೌಕ್‌ನಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಠಾಕ್ರೆ ಅವರು ಪಕ್ಷದ ಸ್ಥಳೀಯ ಮುಖಂಡರೊಬ್ಬರು ನೀಡಿದ ಕತ್ತಿಯನ್ನು ಹಿಡಿದಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.