ADVERTISEMENT

ಅವಧಿ ಮೀರಿ ವಾಸ್ತವ್ಯ: ದಿನಕ್ಕೆ ₹ 10 ಸಾವಿರ ಬಾಡಿಗೆ

ಮಾಜಿ ಸಚಿವರಿಗ ಅನ್ವಯ: ರಾಜಸ್ಥಾನ ವಿಧಾಸಭೆಯಿಂದ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:02 IST
Last Updated 2 ಆಗಸ್ಟ್ 2019, 18:02 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌   

ಜೈಪುರ: ಮಾಜಿ ಸಚಿವರು ತಮ್ಮ ಅಧಿಕಾರಾವಧಿ ಮುಗಿದ ಎರಡು ತಿಂಗಳ ನಂತರವೂ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಿದ್ದೇ ಆದಲ್ಲಿ ದಿನಕ್ಕೆ ₹ 10,000 ಬಾಡಿಗೆ ನೀಡಬೇಕಾಗುತ್ತದೆ!

ಈ ಸಂಬಂಧ ರಾಜಸ್ಥಾನ ವಿಧಾನ ಸಭೆಯಲ್ಲಿ ಶುಕ್ರವಾರ ಮಂಡಿಸಲಾದ ರಾಜಸ್ಥಾನ ಸಚಿವರ ವೇತನ (ತಿದ್ದುಪಡಿ) ಮಸೂದೆಯನ್ನು ಬಿಜೆಪಿ ವಿರೋಧದ ನಡುವೆ ಅಂಗೀಕರಿಸಲಾಗಿದೆ.

ಅಧಿಕಾರಾವಧಿ ಮುಗಿದ ಮೇಲೆ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದರೆ, ಎರಡು ತಿಂಗಳ ನಂತರ ಮಾಸಿಕ ₹ 5,000 ಬಾಡಿಗೆ ನೀಡಬೇಕು. ಸರ್ಕಾರಿ ಬಂಗಲೆ ಖಾಲಿ ಮಾಡಲು ನಿರಾಕರಿಸುವವರನ್ನು ಹೊರಹಾಕಲು ಮಸೂದೆಯಲ್ಲಿ ಅವಕಾಶವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.