ADVERTISEMENT

ರಾಜಸ್ಥಾನ: ಅಪಘಾತದಲ್ಲಿ ಏಳು ಮಕ್ಕಳು ಸೇರಿ 11 ಮಂದಿ ಸಾವು

ಪಿಟಿಐ
Published 13 ಆಗಸ್ಟ್ 2025, 13:55 IST
Last Updated 13 ಆಗಸ್ಟ್ 2025, 13:55 IST
ಜಖಂಗೊಂಡಿದ್ದ ಪಿಕಪ್‌ ವಾಹನವನ್ನು ಸಾಗಿಸಲಾಯಿತು –ಪಿಟಿಐ ಚಿತ್ರ
ಜಖಂಗೊಂಡಿದ್ದ ಪಿಕಪ್‌ ವಾಹನವನ್ನು ಸಾಗಿಸಲಾಯಿತು –ಪಿಟಿಐ ಚಿತ್ರ   

ಜೈಪುರ: ಪಿಕಪ್‌ ವ್ಯಾನ್‌ವೊಂದು ನಿಲ್ಲಿಸಿದ್ದ ಟ್ರಕ್‌ಗೆ ಗುದ್ದಿದ ಪರಿಣಾಮ ಏಳು ಮಕ್ಕಳು ಸೇರಿ 11 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪಿಕಪ್‌ನಲ್ಲಿದ್ದ ಪ್ರಯಾಣಿಕರು ಖಾಟು ಶ್ಯಾಮ್‌ ಮತ್ತು ಸಾಲಾಸರ್‌ ಬಾಲಾಜಿ ದೇಗುಲಕ್ಕೆ ಭೇಟಿ ನೀಡಿ ಉತ್ತರ ಪ್ರದೇಶದ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಬುಧವಾರ ಮುಂಜಾನೆ 4ರಿಂದ 5 ಗಂಟೆ ಸುಮಾರಿಗೆ ಮನೋಹರಪುರ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ ಎಂದು ದೌಸಾದ ಪೊಲೀಸ್‌ ವರಿಷ್ಠಾಧಿಕಾರಿ ಸಾಗರ್‌ ಅವರು ತಿಳಿಸಿದರು.

ಅಪಘಾತದ ಸಂದರ್ಭದಲ್ಲಿ ಪಿಕ‍ಪ್‌ನಲ್ಲಿ 20 ಮಂದಿ ಇದ್ದರು. ಈ ಪೈಕಿ ಏಳು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದರು.

ADVERTISEMENT

ಅವಘಡದ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.