ADVERTISEMENT

ವಿವಾಹಪೂರ್ವ ವಿಡಿಯೊಶೂಟ್‌ನಲ್ಲಿ ಲಂಚ ಪಡೆದ ಪೊಲೀಸ್‌

ಯುಟೂಬ್‌ ವಿಡಿಯೊದಿಂದ ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 17:11 IST
Last Updated 27 ಆಗಸ್ಟ್ 2019, 17:11 IST
   

ಜೈಪುರ: ‌ತಮ್ಮವಿವಾಹಪೂರ್ವ ವಿಡಿಯೊಶೂಟ್‌ನಲ್ಲಿ ಲಂಚ ಪಡೆಯುತ್ತಿರುವಂತೆ ಕಾಣಿಸಿಕೊಂಡಿರುವ ರಾಜಸ್ಥಾನದ ಪೊಲೀಸ್‌ ಅಧಿಕಾರಿಯೊಬ್ಬರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಯುಟ್ಯೂಬ್‌ನಲ್ಲಿ ಈ ವಿಡಿಯೊ ಅಪ್‌ಲೋಡ್‌ ಆಗಿದ್ದು, ಇದನ್ನು ನೋಡಿರುವ ಮೇಲಧಿಕಾರಿಗಳು ಪೊಲೀಸ್‌ ಅಧಿಕಾರಿ ಧನಪತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಉದಯಪುರ ಜಿಲ್ಲೆಯೆಲ್ಲಿ ಕಾರ್ಯನಿರ್ವಹಿಸುತ್ತಿರುವ ಧನಪತ್ ವಿರುದ್ಧ ಮೇಲಧಿಕಾರಿ ಕ್ರಮ ಕೈಗೊಳ್ಳಬೇಕೆಂದು, ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ಹವಾ ಸಿಂಗ್ ಘೊಮಾರಿಯಾ ಅವರು ನೋಟಿಸ್ ನೀಡಿದ್ದಾರೆ.

ADVERTISEMENT

ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿ ಧನಪತ್ , ಹೆಲ್ಮೆಟ್‌ ಇಲ್ಲದೆ ಗಾಡಿ ಚಲಾಯಿಸುತ್ತಿದ್ದ ಕಿರಣ್‌ಗೆ (ಈಗ ಪತ್ನಿ) ದಂಡ ವಿಧಿಸುತ್ತಾರೆ. ಆಗ ಕಿರಣ್ ಪೊಲೀಸ್‌ ಅಧಿಕಾರಿಯ ಜೇಬಿನಲ್ಲಿ ದುಡ್ಡು ಇರಿಸಿ ಹೋಗುತ್ತಾರೆ. ಆದರೆ ಆಕೆ ತನ್ನ ಪರ್ಸ್‌ ಅನ್ನು ತೆಗೆದುಕೊಂಡುಹೋಗಿರುವುದು ಬಳಿಕ ತಿಳಿಯುತ್ತದೆ. ಅದನ್ನು ವಾಪಸ್ ಪಡೆಯುವ ಸಲುವಾಗಿ ಧನಪತ್ ‍ಪುನಃ ಮಹಿಳೆಯನ್ನು ಭೇಟಿ ಮಾಡುತ್ತಾರೆ. ಇಬ್ಬರೂ ಆಗ ಪರಸ್ಪರ ಪ್ರೀತಿಗೆ ಒಳಗಾಗುತ್ತಾರೆ ಎಂದು ವಿಡಿಯೊದಲ್ಲಿ ಚಿತ್ರಿಸಲಾಗಿದೆ. ವಿಡಿಯೊ ಹಿನ್ನೆಲೆಯಲ್ಲಿಬಾಲಿವುಡ್‌ ಹಾಡುಗಳು ಕೇಳಿಬರುತ್ತವೆ.

‘ಮತ್ತೊಬ್ಬ ಪೊಲೀಸ್‌ ಅಧಿಕಾರಿಯೊಬ್ಬರು ಈ ವಿಡಿಯೊ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಸಮವಸ್ತ್ರ ದುರ್ಬಳಕೆ ಮಾಡಿಕೊಂಡಿರುವುದರಿಂದ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯಾಗಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

‘ಸಮವಸ್ತ್ರದ ಘನತೆ ಕಾಪಾಡಿಕೊಳ್ಳಬೇಕು ಹಾಗೂ ವಿವಾಹಪೂರ್ವ ಫೊಟೊ/ವಿಡಿಯೊ ಶೂಟ್‌ನಲ್ಲಿ ಸಮವಸ್ತ್ರ ಧರಿಸುವಂತಿಲ್ಲ’ ಎಂದು ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.