ADVERTISEMENT

ಮದುವೆ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಅತಿಥಿಗಳು ಭಾಗಿ, 15 ಮಂದಿಗೆ ಕೋವಿಡ್ ಸೋಂಕು

ಪಿಟಿಐ
Published 28 ಜೂನ್ 2020, 9:02 IST
Last Updated 28 ಜೂನ್ 2020, 9:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಿಲ್ವಾರ: ಕೊರೊನಾವೈರಸ್ ಭೀತಿ ನಡುವೆಯೇಮದುವೆ ಸಮಾರಂಭಕ್ಕೆ50ಕ್ಕಿಂತ ಹೆಚ್ಚು ಮಂದಿ ಅತಿಥಿಗಳನ್ನು ಆಹ್ವಾನಿಸಿದ ಕುಟುಂಬಕ್ಕೆ ಜಿಲ್ಲಾಡಳಿತ ₹6 ಲಕ್ಷಕ್ಕಿಂತಲೂ ಹೆಚ್ಚು ದಂಡ ವಿಧಿಸಿದೆ.

ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಭಡಡಾ ಮೊಹಲ್ಲಾ ನಿವಾಸಿ ಘೀಸುಲಾಲ್ ರಾಠಿ ಎಂಬವರ ಮಗನ ಮದುವೆ ಜೂನ್ 13ರಂದು ನಡೆದಿತ್ತು. ಕೋವಿಡ್-19 ರೋಗ ವ್ಯಾಪಿಸುತ್ತಿರುವ ಹೊತ್ತಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂಬ ನಿರ್ಬಂಧವಿದ್ದರೂ ಆ ಮದುವೆಯಲ್ಲಿ 50ಕ್ಕಿಂತಲೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಮದುವೆ ಸಮಾರಂಭ ಮುಗಿದ ಅತಿಥಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು ಇದರಲ್ಲಿ 15 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ಹೇಳಿದ್ದಾರೆ.ರಾಠಿ ಕುಟುಂಬದವಿರುದ್ಧ ಜೂನ್ 22ಕ್ಕೆ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.