ADVERTISEMENT

ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ #meetoo ಆರೋಪ

ಏಜೆನ್ಸೀಸ್
Published 13 ಜನವರಿ 2019, 13:35 IST
Last Updated 13 ಜನವರಿ 2019, 13:35 IST
ರಾಜಕುಮಾರ್‌ ಹಿರಾನಿ
ರಾಜಕುಮಾರ್‌ ಹಿರಾನಿ   

ಮುಂಬೈ:ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್ಸ್‌, ಪಿಕೆ, ಸಂಜು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದೆ.

ಆರೋಪ ಮಾಡಿರುವ ಮಹಿಳೆಸಂಜು ಸಿನಿಮಾಗಾಗಿಹಿರಾನಿ ಜೊತೆಯಲ್ಲಿ ಕೆಲಸ ಮಾಡಿದ್ದರು. 2018ರ ಮಾರ್ಚ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.

2018ರ ನವೆಂಬರ್ 3ರಂದುಹಿರಾನಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನಿರ್ಮಾಪಕ ವಿಧು ವಿನೋದ್‌ ಚೋಪ್ರಾ, ಸಿನಿಮಾ ವಿಮರ್ಶಕ ಅನುಪಮ ಚೋಪ್ರಾ, ಚಿತ್ರಕತೆ ಬರಹಗಾರ ಅಭಿಜಾತ್ ಜೋಷಿ,ವಿನೋದ್‌ ಚೋಪ್ರಾ ಸಹೋದರಿಗೆಇ–ಮೇಲ್‌ ಮಾಡಿದ್ದಾರೆ ಎಂದು ಹಫಿಂಗ್ಟನ್‌ ಫೋಸ್ಟ್‌ವರದಿ ಮಾಡಿದೆ. ಆದರೆ ಆ ಮಹಿಳೆ ಯಾರು ಎಂಬುದನ್ನು ಹಫಿಂಗ್ಟನ್‌ ಫೋಸ್ಟ್‌ ಬಹಿರಂಗಪಡಿಸಿಲ್ಲ.

ADVERTISEMENT

2018ರ ಏಪ್ರಿಲ್‌ 9ರಂದು ಮೊದಲ ಬಾರಿ ನನಗೆ ಲೈಂಗಿಕಕಿರುಕುಳ ನೀಡಿದ್ದರು, ನಾನು ಅವರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ನೇರವಾಗಿ ಹೇಳಿದ್ದೆ ಆದರೂಅವರು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರುಎಂದು ಅವರು ದೂರಿದ್ದಾರೆ.

ರಾಜಕುಮಾರ್ ಹಿರಾನಿ ಮೇಲಿನ ಮೀ ಟೂ ಆರೋಪ ಕುರಿತಂತೆ ಅವರ ವಕೀಲ ಆನಂದ್‌ ದೆಸಾಯಿ ಪ್ರತಿಕ್ರಿಯಿಸಿದ್ದುಇದೊಂದು ಸುಳ್ಳುಆರೋಪ ಎಂದಿದ್ದಾರೆ.ದುರುದ್ದೇಶದಿಂದ ಕೂಡಿರುವಆರೋಪ ಇದಾಗಿದ್ದುಅವರ ವಿರುಧ್ಧ ಕಾನೂನು ಹೋರಾಟ ನಡೆಸುವುದಾಗಿ ಆನಂದ್‌ ದೇಸಾಯಿ ಹೇಳಿದ್ದಾರೆ ಎಂದು ಹಫಿಂಗ್ಟನ್‌ ಫೋಸ್ಟ್‌ ಇಂಡಿಯಾವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.