ಲಖನೌ: ‘ಬ್ರಹ್ಮೋಸ್ ಕೇವಲ ಒಂದು ಆಯುಧವಷ್ಟೇ ಅಲ್ಲ, ಇದು ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯ ಕುರಿತು ಸಂದೇಶ ಸಾರುವ ಕ್ಷಿಪಣಿ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಖನೌ ಬಳಿಯ ‘ಉತ್ತರ ಪ್ರದೇಶ ರಕ್ಷಣಾ ಕೈಗಾರಿಕೆ ಕಾರಿಡಾರ್’ನಲ್ಲಿ ಸ್ಥಾಪಿಸಲಾಗಿರುವ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಶನ್ ಅಂಡ್ ಟೆಸ್ಟಿಂಗ್ ಫೆಸಿಲಿಟಿಯನ್ನು (ಬಿಎಐಟಿಎಫ್) ವರ್ಚುವಲ್ ಆಗಿ ಉದ್ಘಾಟಿಸಿದ ಅವರು, ‘ಪ್ರಸ್ತುತ ನಮ್ಮ ಸುತ್ತ ಸೃಷ್ಟಿಯಾಗಿರುವ ಸನ್ನಿವೇಶ ಅವಲೋಕಿಸಿದಾಗ, ನಮ್ಮ ಗುರಿಗಳನ್ನು ನಿಗದಿತ ಗಡುವಿನೊಳಗೆ ಸಾಧಿಸಿರುವುದು ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.
‘1998ರ ಮೇ 11ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ, ಪೋಖ್ರಾನ್‌ನಲ್ಲಿ ನಮ್ಮ ವಿಜ್ಞಾನಿಗಳು ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರಿಸಿದ್ದರು. ಅದರ ನೆನಪಿಗಾಗಿ ಮೇ 11 ಅನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಅಚರಿಸಲಾಗುತ್ತದೆ’ ಎಂದೂ ಹೇಳಿದರು.
‘ಆಪರೇಷನ್ ಸಿಂಧೂರ’ ಕುರಿತು ಪ್ರಸ್ತಾಪಿಸಿದ ಅವರು, ‘ಈ ಕಾರ್ಯಾಚರಣೆಯು ಭಾರತದ ಆತ್ಮವಿಶ್ವಾಸ, ಮಿಲಿಟರಿ ಸಾಮರ್ಥ್ಯದ ಪ್ರತೀಕವಾಗಿದೆ. ನಮ್ಮ ಪಡೆಗಳ ಸಾಮರ್ಥ್ಯವು ಪಾಕಿಸ್ತಾನ ಮಿಲಿಟರಿಯ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿವರೆಗೂ ಅನುಭವಕ್ಕೆ ಬಂದಿದೆ ’ ಎಂದು ಹೇಳಿದರು.
‘ಉಗ್ರವಾದದ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳು ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ ಎಂಬುದನ್ನು ಭಾರತ ಈ ಕಾರ್ಯಾಚರಣೆ ಮೂಲಕ ಸ್ಪಷ್ಟಪಡಿಸಿದೆ’ ಎಂದೂ ಹೇಳಿದ್ದಾರೆ.ಮೂರೂವರೆ ವರ್ಷದಲ್ಲಿ ಘಟಕ ಸ್ಥಾಪನೆ: ರಾಜನಾಥ್ ಸಿಂಗ್ ರಾಷ್ಟ್ರೀಯ ತಂತ್ರಜ್ಞಾನ ದಿನವೇ ಉದ್ಘಾಟನೆ 80 ಎಕರೆಯಲ್ಲಿ ಕ್ಷಿಪಣಿ ತಯಾರಿಕಾ ಘಟಕ
ಮೂರೂವರೆ ವರ್ಷದಲ್ಲಿ ಘಟಕ ಸ್ಥಾಪನೆ: ರಾಜನಾಥ್ ಸಿಂಗ್ ರಾಷ್ಟ್ರೀಯ ತಂತ್ರಜ್ಞಾನ ದಿನವೇ ಉದ್ಘಾಟನೆ 80 ಎಕರೆಯಲ್ಲಿ ಕ್ಷಿಪಣಿ ತಯಾರಿಕಾ ಘಟಕ
ಜಗತ್ತು ಬಲಿಷ್ಠರನ್ನು ಮಾತ್ರ ಗೌರವಿಸುತ್ತದೆ. ವಿಶ್ವದ ಬಲಿಷ್ಠ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆರಾಜನಾಥ್ ಸಿಂಗ್ ರಕ್ಷಣಾ ಸಚಿವ
ಬ್ರಹ್ಮೋಸ್ ಕ್ಷಿಪಣಿ ಅತ್ಯಂತ ಶಕ್ತಿಶಾಲಿ. ಇದರ ಸಾಮರ್ಥ್ಯ ಕುರಿತು ಹೆಚ್ಚು ಮಾಹಿತಿ ಬೇಕಾದಲ್ಲಿ ಪಾಕಿಸ್ತಾನವನ್ನು ಕೇಳಿಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.