ADVERTISEMENT

ದೀರ್ಘ ಸಂಘರ್ಷಗಳಿಗೆ ಸಶಸ್ತ್ರ ಪಡೆಗಳು ಸಿದ್ಧವಾಗಿರಬೇಕು: ರಾಜನಾಥ್ ಸಿಂಗ್

ಪಿಟಿಐ
Published 27 ಆಗಸ್ಟ್ 2025, 6:56 IST
Last Updated 27 ಆಗಸ್ಟ್ 2025, 6:56 IST
   

ಮೊವ್ (ಮಧ್ಯಪ್ರದೇಶ): ಅನಿರೀಕ್ಷಿತ ಭೌಗೋಳಿಕ ರಾಜಕೀಯವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆಯು ಅಲ್ಪಾವಧಿ ಸಂಘರ್ಷಗಳಿಂದ ಹಿಡಿದು ಐದು ವರ್ಷಗಳ ದೀರ್ಘ ಯುದ್ಧಕ್ಕೂ ಸಿದ್ಧವಾಗಿರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.

ಮೊವ್‌ನ ಸೇನಾ ತರಬೇತಿ ಕಾಲೇಜಿನಲ್ಲಿ ಜರುಗಿದ 'ರಣ್ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಭಾರತ ಯಾರ ಭೂಮಿಯನ್ನು ಕೂಡ ಬಯಸುವುದಿಲ್ಲ. ಆದರೆ, ತನ್ನ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ. ಎಲ್ಲಾ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಸೇನೆ ಸಿದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.

ADVERTISEMENT

'ಆಪರೇಷನ್ ಸಿಂಧೂರ' ಕಾರ್ಯಚರಣೆಯು ಭಾರತದ ಸ್ಥಳೀಯ ವೇದಿಕೆಗಳು, ಉಪಕರಣಗಳು ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳ ಯಶಸ್ಸಿಗೆ ಉತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಸಿಡಿಎಸ್ ಅನಿಲ್ ಚೌಹಾಣ್, ವಾಯುಪಡೆ ಮುಖ್ಯಸ್ಥ ಮಾರ್ಷಲ್ ಎ.ಪಿ. ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಸೇರಿದಂತೆ ಇತರ ಪ್ರಮುಖ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.