ADVERTISEMENT

ವಿರೋಧ ಪಕ್ಷದವರು ರಾಮದ್ರೋಹಿಗಳು: ಯೋಗಿ ಆದಿತ್ಯನಾಥ

ಪಿಟಿಐ
Published 11 ಮೇ 2024, 15:29 IST
Last Updated 11 ಮೇ 2024, 15:29 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಬೇಗುಸರಾಯ್‌ (ಬಿಹಾರ)(ಪಿಟಿಐ): ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದವರು ‘ರಾಮ ದ್ರೋಹಿ’ಗಳು. ಅವರು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶನಿವಾರ ಟೀಕಿಸಿದರು.

ಬೇಗುಸರಾಯ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಿರಿರಾಜ್‌ ಸಿಂಗ್‌ ಪರ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಗೋ ಹತ್ಯೆ ಮಾಡುವವರಿಗೆ ಬೆಂಬಲ ನೀಡುತ್ತಿದ್ದು, ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿವೆ ಎಂದು ಆರೋಪಿಸಿದರು. 

ಈ ಚುನಾವಣೆಯು ‘ರಾಮ ಭಕ್ತರು’ ಮತ್ತು ‘ರಾಮ ದ್ರೋಹಿ’ಗಳ ನಡುವಿನ ಆಯ್ಕೆಯನ್ನು ಜನರಿಗೆ ನೀಡಲಿದೆ ಎಂದರು.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.