ADVERTISEMENT

ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2025, 11:12 IST
Last Updated 27 ನವೆಂಬರ್ 2025, 11:12 IST
<div class="paragraphs"><p>ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಅವರು ಮಂಗಳವಾರ ಧ್ವಜಾರೋಹಣ ನೆರವೇರಿಸಿದರು. </p></div>

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ಮೋದಿ ಅವರು ಮಂಗಳವಾರ ಧ್ವಜಾರೋಹಣ ನೆರವೇರಿಸಿದರು.

   

ಅಯೋಧ್ಯೆ ರಾಮ ಮಂದಿರ ಪೂರ್ಣಗೊಂಡ ಹಿನ್ನೆಲೆ ನಿನ್ನೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿಯವರು ಮಂದಿರದ ಮೇಲೆ ಬೃಹತ್ ಗಾತ್ರದ ಕೇಸರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಧ್ವಜಾರೋಹಣ ಪೂರ್ಣಗೊಳ್ಳುತ್ತಿದ್ದಂತೆ ನಮಸ್ಕರಿಸುತ್ತಿದ್ದ ಪ್ರಧಾನಿ ಮೋದಿಯವರ ಕೈಗಳು ನಡುಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ನೂರಾರು ಸಾಧು–ಸಂತರು ಸಾಥ್ ನೀಡಿದರು.

ADVERTISEMENT

ಪ್ರಧಾನಿ ಮೋದಿಯವರು ಧ್ವಜಾರೋಹಣ ನೆರೆವೇರಿಸಲು ಬಟನ್ ಕ್ಲಿಕ್ ಮಾಡಿದ ನಂತರ, ಕೇಸರಿ ಬಣ್ಣದ ಧ್ವಜ ನಿಧಾನವಾಗಿ ಮೇಲಕ್ಕೆ ಚಲಿಸಿತು. ಕೆಲವು ಸೆಕೆಂಡುಗಳ ಬಳಿಕ ಅದು ತನ್ನ ಅಂತಿಮ ಸ್ಥಾನ ತಲುಪಿತು. ಆ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಎಲ್ಲರೂ ಸಂತಸ ವ್ಯಕ್ತಪಡಿಸಿ, ಧ್ವಜಕ್ಕೆ ಭಕ್ತಿಯಿಂದ ನಮಸ್ಕರಿಸಿದರು. ಈ ವೇಳೆ ಪ್ರಧಾನಿ ಮೋದಿಯವರು ಕೂಡ ನಮಸ್ಕರಿಸಿದರು. ಆ ಸಂದರ್ಭದಲ್ಲಿ ಅವರ ಕೈಗಳು ನಡುಗಿರುವುದು ಕಂಡು ಬಂದಿತು.

ವಿಡಿಯೊದಲ್ಲಿ ನಿಖರವಾಗಿ ಏನಿದೆ?

ಪ್ರಧಾನಿ ಮೋದಿ ಧ್ವಜವಂದನೆ ಮಾಡುವಾಗ ಅವರ ಕೈಗಳು ನಡುಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೊ ಗಮನಿಸಿದ ಜನರು, ಮೋದಿಯವರಿಗೆ ಆರೋಗ್ಯ ಸಮಸ್ಯೆ ಎದುರಾಯಿತೇ? ಅವರ ಕೈಗಳು ಏಕೆ ನಡುಗುತ್ತಿವೆ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೆಲವರು ಕೈ ನಡುಗಿರುವುದನ್ನು ಪಾರ್ಕಿನ್ಸನ್ ಅಥವಾ ವಯೋ ಸಹಜ ಸಮಸ್ಯೆ ಇರಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಮೋದಿಯವರೆ ನಿಮ್ಮ ‘ಕೈಗಳು ನಡುಗುತ್ತಿವೆ, ವಿಶ್ರಾಂತಿ ಪಡೆಯಿರಿ’ ಎಂದು ಸಲಹೆ ನೀಡಿದ್ದಾರೆ.

ಮೋದಿ ಕೈಗಳು ನಡುಗಿದ್ದೇಕೆ?

ಅಸಲಿಗೆ ಮೋದಿಯವರಿಗೆ ಯಾವುದೇ ಆರೋಗ್ಯ ಸಂಬಂಧಿಸಿದ ಸಮಸ್ಯೆ ಇಲ್ಲ. ವಯೋ ಸಹಜ ಕಾಯಿಲೆಯೂ ಇಲ್ಲ. ಬದಲಾಗಿ ಅವರ ಕೈಗಳು ನಡುಗಿರುವುದು ಅತಿಯಾದ ಭಕ್ತಿಯಿಂದ ಮೈಮರೆತಿರುವುದಕ್ಕೆ. ಒಬ್ಬ ವ್ಯಕ್ತಿ ಅತಿಯಾದ ಭಕ್ತಿ, ಆನಂದ ಅಥವಾ ಭಾವನಾತ್ಮಕತೆಯ ಉತ್ತುಂಗ ತಲುಪಿದಾಗ ಮಾತು ಹೊರಡದೆ ದೇಹವು ತನ್ನ ನಿಯಂತ್ರಣ ಕಳೆದುಕೊಂಡು ಈ ರೀತಿ ಪ್ರತಿಕ್ರಿಯಿಸುತ್ತದೆ.

ಭಾವಪರವಶತೆಗೆ ಒಳಗಾದ ಸಂದರ್ಭದಲ್ಲಿ ಸಹಜವಾಗಿ ನರನಾಡಿಗಳು ಬಿಗಿಯಲ್ಪಡುತ್ತವೆ. ಇದರಿಂದಾಗಿ ಕೈ – ಕಾಲುಗಳಲ್ಲಿ ನಡುಕ ಕಾಣಬರುವುದು ಸಹಜ. ಮಿದುಳಿನಲ್ಲಿನ ರಾಸಾಯನಿಕ ಪ್ರಕ್ರಿಯೆಗಳ ಏರಿಳಿತದಿಂದಾಗಿ ಕೆಲ ಕ್ಷಣಗಳ ವರೆಗೆ ಇಂತಹ ಭಾವೋದ್ವೇಗಕ್ಕೆ ವ್ಯಕ್ತಿಗಳು ಒಳಗಾಗುತ್ತಾರೆ. ಆನಂದ ಬಾಷ್ಪ ಸುರಿಯುವುದೂ ಇಂತಹದೇ ಪ್ರಕ್ರಿಯ ಭಾಗ.
– ಡಾ. ಸುದರ್ಶನ್, ತಜ್ಞ ವೈದ್ಯ – ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.