ADVERTISEMENT

‘ವಿಶ್ವದ ಸಾಂಸ್ಕೃತಿಕ ರಾಜಧಾನಿಯಾಗಿ ಅಯೋಧ್ಯೆ’

ಪಿಟಿಐ
Published 31 ಡಿಸೆಂಬರ್ 2020, 15:19 IST
Last Updated 31 ಡಿಸೆಂಬರ್ 2020, 15:19 IST
ಅಯೋಧ್ಯ
ಅಯೋಧ್ಯ   

ಪುಣೆ: ‘ರಾಮಮಂದಿರವು ಅಯೋಧ್ಯೆಯನ್ನು ವಿಶ್ವದ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಮಾಡಲಿದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್‌ ದೇವ್‌ ಗಿರಿಜಿ ಮಹಾರಾಜ ಗುರುವಾರ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ಜ.15ರಂದು ರಾಷ್ಟ್ರಮಟ್ಟದಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದರು.

‘ನಾಲ್ಕು ಲಕ್ಷ ಹಳ್ಳಿಗಳಲ್ಲಿನ 11 ಕೋಟಿ ಕುಟುಂಬವನ್ನು ತಲುಪುವ ಗುರಿ ಇದೆ. ₹1,000, ₹100 ಹಾಗೂ ₹10ರ ಕೂಪನ್‌ ನೀಡಿ ನಿಧಿ ಸಂಗ್ರಹಿಸಲಾಗುವುದು. ಈ ಹಣವನ್ನು ತಕ್ಷಣವೇ ಟ್ರಸ್ಟ್‌ನ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.