
ರೇವಾ: ರಾಮ ಜನ್ಮಭೂಮಿ ಚಳವಳಿಯ ಮುಖಂಡ, ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ (67) ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.
ರಕ್ತದ ವಿಷ ಸೋಂಕಿನಿಂದ ಬಳಲುತ್ತಿದ್ದ ವೇದಾಂತಿ ಅವರನ್ನು ನಗರದ ಶ್ಯಾಮ್ ಶಾ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಬೆಳಿಗ್ಗೆ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಕ್ಕೊಳಗಾದ ಅವರು ನಿಧನರಾದರು ಎಂದು ಆಸ್ಪತ್ರೆಯ ಅಧೀಕ್ಷಕ ಅಕ್ಷಯ್ ಶ್ರೀವಾಸ್ತವ ತಿಳಿಸಿದ್ದಾರೆ.
ವೇದಾಂತಿ ಅವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಪ್ರತಾಪ್‌ಗಢ ಮತ್ತು ಮಛಲಿಶಹರ್ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
ಪ್ರಸ್ತುತ ರೇವಾ ಜಿಲ್ಲೆಯಲ್ಲಿ ‘ಕಥಾ ಭತ್ವಾ’ ನಿರೂಪಿಸುತ್ತಿದ್ದರು. 1958ರ ಅ.7ರಂದು ಗುಡ್ವಾದಲ್ಲಿ ಜನಿಸಿದ್ದರು. ಅಂತಿಮ ವಿಧಿಗಳನ್ನು ಅಯೋಧ್ಯೆಯಲ್ಲಿ ನಡೆಸಲಾಗುವುದು ಎಂದು ವೇದಾಂತಿ ಅವರ ಶಿಷ್ಯ ಛೋಟೆ ದಾಸ್ ಮಹಾರಾಜ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.