ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಬೆಳಿಗ್ಗೆ ಸಂವಿಧಾನದ ಮೂಲ ದಾಖಲೆಯಲ್ಲಿರುವ ರಾಮಾಯಣ ಕಥೆಯನ್ನು ವಿವರಿಸುವ ಭಗವಾನ್ ರಾಮ, ಸೀತಾ ಮತ್ತು ಲಕ್ಷಣರ ರೇಖಾಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
’ಇದು ರಾಮ–ಲಕ್ಷ್ಮಣರು, ರಾವಣನನ್ನು ಸೋಲಿಸಿದ ನಂತರ ಅಯೋಧ್ಯೆಗೆ ಹಿಂದಿರುಗುವ ರಾಮಾಯಣದ ಸನ್ನಿವೇಶವನ್ನು ವಿವರಿಸುವಂತಹ ಈ ರೇಖಾಚಿತ್ರ. ಈ ಚಿತ್ರ ಭಾರತದ ಸಂವಿಧಾನದ ಮೂಲ ಕೃತಿಯಲ್ಲಿದೆ’ ಎಂದು ಮಾಹಿತಿಯನ್ನೂ ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ.
’ಭಾರತೀಯ ಸಂವಿಧಾನ ಗ್ರಂಥದಲ್ಲಿ ಮೂಲಭೂತ ಹಕ್ಕುಗಳನ್ನು ವಿವರಿಸುವ ಅಧ್ಯಾಯದ ಆರಂಭದಲ್ಲೇ ಈ ಚಿತ್ರವಿದೆ. ಈ ರೇಖಾಚಿತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ’ ಎಂದು ಅವರು ಚಿತ್ರದೊಂದಿಗೆ ಬರೆದಿರುವ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.