ADVERTISEMENT

ಸಂಸದ ರಾಮಚಂದ್ರ ಪಾಸ್ವಾನ್‌ ನಿಧನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:06 IST
Last Updated 21 ಜುಲೈ 2019, 20:06 IST

ನವದೆಹಲಿ: ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್‌ ಅವರ ತಮ್ಮ ಹಾಗೂ ಸಂಸದ ರಾಮಚಂದ್ರ ಪಾಸ್ವಾನ್‌ ಅಲ್ಪಕಾಲದ ಅನಾರೋಗ್ಯದ ಬಳಿಕ ಭಾನುವಾರ ನಿಧನರಾದರು.

ಅವರಿಗೆ 57 ವರ್ಷ ವಯಸ್ಸಾಗಿತ್ತು. ಲೋಕಜನಶಕ್ತಿ ಪಕ್ಷದ ನಾಯಕರಾಗಿದ್ದ ರಾಮಚಂದ್ರ ಅವರು ಬಿಹಾರದ ಸಮಷ್ಟಿಪುರದಿಂದ ನಾಲ್ಕು ಅವಧಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಜುಲೈ 12ರಂದು ಹೃದಯಾಘಾತವಾದಾಗ ಅವರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT