ಪಟ್ನಾ: ಕೆಲವು ವರ್ಷಗಳ ಹಿಂದೆ ಜೆಡಿಯು ತ್ಯಜಿಸಿದ್ದ ಬಿಹಾರದ ಮಾಜಿ ಶಾಸಕ ರಮೇಶ್ ಸಿಂಗ್ ಕುಶ್ವಾಹ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಶನಿವಾರ ಮರಳಿ ಜೆಡಿಯು ಸೇರ್ಪಡೆಯಾದರು. ಮೂಲಗಳ ಪ್ರಕಾರ, ಕುಶ್ವಾಹ ಅಥವಾ ಅವರ ಪತ್ನಿಯನ್ನು ಸಿವಾನ್ ಕ್ಷೇತ್ರದಿಂದ ಜೆಡಿಯು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ: ಮಧ್ಯಪ್ರದೇಶದ ಕಾಂಗ್ರೆಸ್‌ನ ಮಾಜಿ ಶಾಸಕ ಮನೋಜ್ ಚಾವ್ಲಾ ಶನಿವಾರ ಬಿಜೆಪಿ ಸೇರ್ಪಡೆಯಾದರು. ‘ವೈಯಕ್ತಿಕ ಕಾರಣ’ ಕಾರಣ ನೀಡಿ ಕಾಂಗ್ರೆಸ್ ತ್ಯಜಿಸಿದ ಕೆಲವೇ ಗಂಟೆಗಳಲ್ಲಿ ಅವರು ಬಿಜೆಪಿ ಸೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.