(ಚಿತ್ರ ಕೃಪೆ–ಎಕ್ಸ್)
ನವದೆಹಲಿ: ಗುಜರಾತ್‌ನ ಕಛ್ ಮತ್ತು ಉತ್ತರ ಪ್ರದೇಶದ ಎಟಾ ಜೌಗು ಪ್ರದೇಶಗಳನ್ನು ‘ರಾಮ್‌ಸಾರ್’ (ಜೌಗು ಪ್ರದೇಶಗಳಿಗೆ ನೀಡುವ ಅಂತರರಾಷ್ಟ್ರೀಯ ಮಾನ್ಯತೆ) ಪ್ರದೇಶ ಎಂದು ಗುರುತಿಸಲಾಗಿದೆ.
‘ಕಛ್‌ನ ಧರಿ– ಢಂಡ್ ಮತ್ತು ಎಟಾದಲ್ಲಿನ ಪಟನಾ ಪಕ್ಷಿಧಾಮಕ್ಕೆ ‘ರಾಮ್‌ಸಾರ್’ ಮಾನ್ಯತೆ ನೀಡಲು ಶ್ರಮಿಸಿದವರಿಗೆ ಹಾಗೂ ಅಲ್ಲಿನ ಸ್ಥಳೀಯ ಜನರಿಗೆ ಅಭಿನಂದನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
‘ಇದರೊಂದಿಗೆ ಭಾರತದಲ್ಲಿ ‘ರಾಮ್‌ಸಾರ್’ ಮಾನ್ಯತೆ ಪಡೆದ ಜೌಗು ಪ್ರದೇಶಗಳ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಇದು ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ರಕ್ಷಣೆಗೆ ಸರ್ಕಾರಕ್ಕಿರುವ ಬದ್ಧತೆಯನ್ನು ಸಂಕೇತಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಈ ಜೌಗು ಪ್ರದೇಶಗಳು ಅಸಂಖ್ಯಾತ ಸ್ಥಳೀಯ ಮತ್ತು ವಲಸೆ ಜೀವಿಗಳ ಆವಾಸಸ್ಥಾನವಾಗಿ ಮುಂದುವರಿಯಲಿವೆ ಎಂದಿದ್ದಾರೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರೂ, ಉತ್ತರ ಪ್ರದೇಶ ಮತ್ತು ಗುಜರಾತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.