ADVERTISEMENT

SP ಸಂಸದನ ತಲೆಗೆ ₹25 ಲಕ್ಷ ಬಹುಮಾನ ಘೋಷಣೆ: ಕರ್ಣಿ ಸೇನಾ ನಾಯಕನ ವಿರುದ್ಧ ಪ್ರಕರಣ

ಪಿಟಿಐ
Published 10 ಏಪ್ರಿಲ್ 2025, 11:21 IST
Last Updated 10 ಏಪ್ರಿಲ್ 2025, 11:21 IST
<div class="paragraphs"><p>ಮೋಹನ್ ಚವಾಣ್‌</p></div>

ಮೋಹನ್ ಚವಾಣ್‌

   

ಚಿತ್ರ ಕೃಪೆ: ಎಕ್ಸ್‌

ಅಲಿಗಢ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ರಾಮ್‌ಜಿ ಲಾಲ್‌ ಸುಮನ್‌ ಅವರನ್ನು ಹತ್ಯೆಗೈದವರಿಗೆ ₹25 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿರುವ ಕರಣಿ ಸೇನಾದ ನಾಯಕ ಮೋಹನ್‌ ಚೌಹಾಣ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

ADVERTISEMENT

ರಜಪೂತ ದೊರೆ ರಾಣಾ ಸಂಗಾ ಕುರಿತು ರಾಮ್‌ಜಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದನ್ನು ವಿರೋಧಿಸಿದ್ದ ಮೋಹನ್‌, ‘ತನ್ನ ಹೇಳಿಕೆಗೆ ರಾಮ್‌ಜಿ ಬೆಲೆ ತೆರಬೇಕಾಗುತ್ತದೆ. ಅವರನ್ನು ಹತ್ಯೆ ಮಾಡಿದರೆ ನಾನು ಹಣ ನೀಡುತ್ತೇನೆ. ಅವಕಾಶ ಸಿಕ್ಕರೆ ಖುದ್ದು ನಾನೇ ಅವರನ್ನು ಹತ್ಯೆ ಮಾಡುತ್ತೇನೆ’ ಎಂದು ವಿಡಿಯೊವೊಂದನ್ನು ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 

ಎಸ್‌ಪಿಯ ಮಹಿಳಾ ಸಭಾದ ಮುಖ್ಯಸ್ಥೆ ಆರ್ತಿ ಸಿಂಗ್‌ ಅವರು ಮೋಹನ್‌ ವಿರುದ್ಧ ದೂರು ನೀಡಿದ್ದರು. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.