ಇಟಾನಗರ: ‘ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ವಾಲೊಂಗ್‌ನಲ್ಲಿ ಅಪರೂಪದ ಬಿಳಿ ಹೊಟ್ಟೆಯ ಕೊಕ್ಕರೆ ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ ಈ ಹಕ್ಕಿ ಪತ್ತೆಯಾಗಿದ್ದು, ಅಂಜಾವ್‌ನ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಸಂತೋಷ್ ಕುಮಾರ್ ರೆಡ್ಡಿ, ಅರಣ್ಯ ಅಧಿಕಾರಿ ನಾಸಿಂಗ್ ಪುಲ್, ವಿಜ್ಞಾನಿ ದೇಕ್‌ಬಿನ್ ಯೋಂಗಮ್ ಅವರು ಈ ಹಕ್ಕಿಯನ್ನು ಗುರುತಿಸಿ, ಕ್ಯಾಮೆರಾದಲ್ಲಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ.
ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸ್‌ರ್ವೇಶನ್ ಆಫ್ ನೇಚರ್ (ಐಯುಸಿಎನ್) ನಿಯತಕಾಲಿಕವು ಈ ಬಿಳಿ ಹೊಟ್ಟೆಯ ಕೊಕ್ಕರೆಯನ್ನು ‘ಅಳಿವಿನಂಚಿನಲ್ಲಿರುವ ಹಕ್ಕಿ’ ಎಂದು ವರ್ಗೀಕರಿಸಿದೆ.
ಈ ಪಕ್ಷಿಯು ಭೂತಾನ್, ಮ್ಯಾನ್ಮಾರ್ ಮತ್ತು ಅರುಣಾಚಲ ಪ್ರದೇಶದ ನಾಮದಫಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾತ್ರ ನೋಡಲು ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.