ADVERTISEMENT

'ಮಹಾ' ಸಿಎಂ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ‘ಸಾಮ್ನಾ’ ಸಂಪಾದಕಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 10:59 IST
Last Updated 1 ಮಾರ್ಚ್ 2020, 10:59 IST
ರಶ್ಮಿ ಉದ್ಧವ್ ಠಾಕ್ರೆ ಜೊತೆ ಸುಪ್ರಿಯಾ ಸುಳೆ
ರಶ್ಮಿ ಉದ್ಧವ್ ಠಾಕ್ರೆ ಜೊತೆ ಸುಪ್ರಿಯಾ ಸುಳೆ   

ಮುಂಬೈ: ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಅವರು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಉದ್ಧವ್ ಅವರ ಆಪ್ತ ಸಂಜಯ್ ರಾವುತ್ ಅವರು ಪತ್ರಿಕೆಯ ಕಾರ್ಯನಿರ್ವಾಹಕ ಸಂಪದಾಕರಾಗಿ ಮುಂದುವರಿಯಲಿದ್ದಾರೆ. ಗ್ರೂಪ್ ಎಡಿಟರ್ ರಾಜೇಂದ್ರ ಭಗತ್ ಅವರು ಭಾನುವಾರ ಪತ್ರಿಕೆಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಅವರು 1983ರಲ್ಲಿ ಮರಾಠಿ ಭಾಷೆಯ ಪತ್ರಿಕೆ ಆರಂಭಿಸಿದ್ದರು. ಪತ್ರಿಕೆಯ ಹಿಂದಿ ಆವೃತ್ತಿ ‘ದೊಪಹರ್ ಕ ಸಾಮ್ನಾ’ 1993ರಲ್ಲಿ ಆರಂಭವಾಗಿತ್ತು. ಈ ಎರಡೂ ಪತ್ರಿಕೆಗಳು ಪ್ರಭೋದನ ಪ್ರಕಾಶನದ ಅಡಿ ಪ್ರಕಟಗೊಳ್ಳುತ್ತಿವೆ.ಠಾಕ್ರೆ ಕುಟುಂಬಕ್ಕೆ ಹತ್ತಿರವಾಗಿರುವ ಸುಭಾಷ್ ದೇಸಾಯಿ, ಲೀಲಾಧರ ಡಾಕೆ ಅವರುಪತ್ರಿಕೆಯ ಟ್ರಸ್ಟಿಗಳಾಗಿದ್ದಾರೆ.

ADVERTISEMENT

ಉದ್ಧವ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಅವರ ಹಿರಿಯ ಮಗ ಪರಿಸರ, ಪ್ರವಾಸೋದ್ಯಮದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.