ADVERTISEMENT

ಜನವರಿ 29ರವರೆಗೆ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ​

ಪಿಟಿಐ
Published 17 ಜನವರಿ 2026, 9:32 IST
Last Updated 17 ಜನವರಿ 2026, 9:32 IST
<div class="paragraphs"><p>ರಾಷ್ಟ್ರಪತಿ ಭವನ</p></div>

ರಾಷ್ಟ್ರಪತಿ ಭವನ

   

ನವದೆಹಲಿ: ಜನವರಿ 21 ರಿಂದ 29ರವರೆಗೆ ರಾಷ್ಟ್ರಪತಿ ಭವನಕ್ಕೆ (ಸರ್ಕ್ಯೂಟ್ 1) ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಶನಿವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆ ತಿಳಿಸಿದೆ.

ಗಣರಾಜ್ಯೋತ್ಸವ ಪರೇಡ್ ಹಾಗೂ ಬೀಟಿಂಗ್‌ ರೀಟ್ರೀಟ್‌ ಕಾರ್ಯಕ್ರಮ ಹಿನ್ನೆಲೆ ಜ.29 ರವರೆಗೆ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ADVERTISEMENT

ಗಣರಾಜ್ಯೋತ್ಸವದ ಪರೇಡ್ ಕರ್ತವ್ಯ ಪಥದಲ್ಲಿ ನಡೆಯಲಿದೆ. ಬೀಟಿಂಗ್ ರಿಟ್ರೀಟ್ ಸಮಾರಂಭ ಜನವರಿ 29 ರಂದು ರಾಷ್ಟ್ರಪತಿ ಭವನದ ಹತ್ತಿರವಿರುವ ವಿಜಯ್ ಚೌಕ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.