ADVERTISEMENT

ರಾಷ್ಟ್ರೋತ್ಥಾನ ಪರಿಷತ್‌: ಉನ್ನತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:11 IST
Last Updated 24 ನವೆಂಬರ್ 2020, 21:11 IST

ಬೆಂಗಳೂರು: ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗುವ ‘ತಪಸ್‌’ (ವಿದ್ಯಾರ್ಥಿಗಳಿಗೆ) ಹಾಗೂ ‘ಸಾಧನಾ’ (ವಿದ್ಯಾರ್ಥಿನಿಯರಿಗೆ) ಯೋಜನೆಗಳಡಿ ರಾಷ್ಟ್ರೋತ್ಥಾನ ಪರಿಷತ್‌ ಅರ್ಜಿ ಆಹ್ವಾನಿಸಿದೆ

‘ತಪಸ್‌’ ಯೋಜನೆಯಡಿ ಗಂಡು ಮಕ್ಕಳಿಗೆ ಪಿಯುಸಿ ಹಾಗೂ ಐಐಟಿ-ಜೆಇಇ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ‘ಸಾಧನಾ’ ಯೋಜನೆಯಡಿ ಹೆಣ್ಣು ಮಕ್ಕಳಿಗೆ ಪಿಯುಸಿ ಜತೆಗೆ ಎನ್‌ಇಇಟಿ, ಸಿಇಟಿ, ಕೆವಿಪಿವೈ ಮುಂತಾದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಸ್ತುತ 10ನೇ ತರಗತಿ ಓದುತ್ತಿರುವವರಾಗಿರಬೇಕು. 9ನೇ ತರಗತಿಯಲ್ಲಿ ಶೇ 80ಕ್ಕೂ ಅಧಿಕ ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 2 ಲಕ್ಷ ಮೀರಿರಬಾರದು. ಅರ್ಜಿಗಳನ್ನು www.tapassaadhana.orgನಲ್ಲಿ 2021 ಜ.10ರೊಳಗೆ ಸಲ್ಲಿಸಬೇಕು. ಜ.31ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಳಿಕ ಸಂದರ್ಶನ ನಡೆಯಲಿದೆ.

ADVERTISEMENT

ಸಂಪರ್ಕ: 9481201144

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.