ಮಣಿಪುರದ ಖ್ಯಾತ ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ರತನ್ ಥಿಯಂ
ಕೃಪೆ: X / @airnewsalerts
ಇಂಫಾಲ್: ಮಣಿಪುರದ ಖ್ಯಾತ ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ರತನ್ ಥಿಯಂ (77) ಅವರು ಬುಧವಾರ ಆಸ್ಪತ್ರೆಯಲ್ಲಿ ನಿಧನರಾದರು.
ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು. ಅವರು ಬುಧವಾರ ಮಧ್ಯಾಹ್ನ 1.30 ಗಂಟೆಗೆ ನಿಧನರಾದರು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರಿ ಕಲಾ ಪ್ರಕಾರಗಳನ್ನು ಸಮಕಾಲೀನ ಕರಕುಶಲತೆ, ನಾವೀನ್ಯ ಮತ್ತು ಕಾವ್ಯಾತ್ಮಕ ನಿರೂಪಣೆಗಳೊಂದಿಗೆ ಬೆರೆಸುವುದರಲ್ಲಿ ಥಿಯಂ ಹೆಸರುವಾಸಿಯಾಗಿದ್ದರು. ಅವರಿಗೆ 1989ರಲ್ಲಿ ಪದ್ಮಶ್ರೀ ಪುರಸ್ಕಾರ ದೊರೆತಿತ್ತು.
ಅವರು 1987–1988ರವರೆಗೆ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.