ADVERTISEMENT

ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್‌ಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 5:45 IST
Last Updated 2 ಆಗಸ್ಟ್ 2019, 5:45 IST
   

ನವದೆಹಲಿ: ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಅವರುರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸಂಯಮದ ಪತ್ರಿಕೋದ್ಯಮದ ಮೂಲಕ ಧ್ವನಿರಹಿತರಿಗೆ ದನಿಯಾಗಿದ್ದಕ್ಕಾಗಿ, ವೃತ್ತಿಯಲ್ಲಿ ಅವರಿಗಿರುವ ಬದ್ಧತೆ ಮತ್ತು ಪತ್ರಿಕೋದ್ಯಮದ ನೈತಿಕತೆಯನ್ನು ಉತ್ತುಂಗಕ್ಕೇರಿಸಿದ್ದಕ್ಕಾಗಿ ರವೀಶ್ ಕುಮಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ಏಷ್ಯಾದ ನೋಬೆಲ್ ಎಂದೇ ಬಣ್ಣಿಸಲಾಗುವ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ರವೀಶ್ ಸೇರಿದಂತೆ 5 ಮಂದಿ ಭಾಜನರಾಗಿದ್ದಾರೆ.

ADVERTISEMENT

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರು
ರವೀಶ್ ಕುಮಾರ್- ಭಾರತ
ಕೋ ಸೆ ವಿನ್- ಮ್ಯಾನ್ಮಾರ್
ಅಂಗ್‌ಖನ ನೀಲಪೈಜಿತ್- ಥಾಯ್ಲೆಂಡ್
ರೇಮುಂಡೊ ಪುಜಂತೆ ಕಯಬ್ಯೂ್ - ಫಿಲಿಫೆನ್ಸ್
ಕಿಮ್ ಜೋಂಗ್ ಕಿ- ದಕ್ಷಿಣ ಕೊರಿಯಾ

ಎನ್‌ಡಿಟಿವಿಯಲ್ಲಿ ರವೀಶ್ ಕುಮಾರ್ ನಡೆಸಿಕೊಡುವ ಪ್ರೈಮ್ ಟೈಮ್ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿ ಸಂದಿದೆ.ಸಾಮಾನ್ಯ ಜನರ ಸಂಕಷ್ಟಗಳ ಬಗ್ಗೆ ಚರ್ಚೆಯಾಗುವ ಕಾರ್ಯಕ್ರಮ ಇದಾಗಿದೆ.44ರ ಹರೆಯದ ಕುಮಾರ್ ಎನ್‌ಡಿಟಿವಿಯ ಸೀನಿಯರ್ ಎಕ್ಸಿಕ್ಯೂಟಿವ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.