ADVERTISEMENT

9.30ಕ್ಕೆ ಕಚೇರಿಯಲ್ಲಿರಿ, ಮನೆಯಿಂದ ಕೆಲಸ ಮಾಡುವುದು ಬಿಡಿ: ಸಚಿವರಿಗೆ ಮೋದಿ ಸೂಚನೆ

ಏಜೆನ್ಸೀಸ್
Published 13 ಜೂನ್ 2019, 5:30 IST
Last Updated 13 ಜೂನ್ 2019, 5:30 IST
   

ನವದೆಹಲಿ: ಎನ್‌ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬಂದ ನಂತರ ಬುಧವಾರ ಮೊದಲ ಬಾರಿಗೆ ಮಂತ್ರಿ ಪರಿಷತ್‌ನ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಚಿವದ್ವಯರಿಗೆ ಹಲವು ಕಟ್ಟಳೆಗಳನ್ನುವಿಧಿಸಿದ್ದಾರೆ.

ಸಮಯ ಪಾಲನೆಯ ಅಗತ್ಯದ ಬಗ್ಗೆ ಅವರು ನೀತಿ ಬೋಧೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು,9.30ಕ್ಕೇ ಕಚೇರಿಯಲ್ಲಿರಬೇಕು, ಮನೆಯಿಂದ ಕೆಲಸ ಮಾಡುವ ಪರಿಪಾಠವನ್ನು ನಿಲ್ಲಿಸಬೇಕು, ಕಚೇರಿಗೆ ಬರುವ ಅಗತ್ಯತೆಯನ್ನು ಸಚಿವರು ಅರಿಯಬೇಕು ಎಂದು ಇಡೀ ಮಂತ್ರಿ ಮಂಡಲಕ್ಕೆ ತಾಕೀತು ಮಾಡಿದ್ಧಾರೆ.

ಪ್ರತಿ ಇಲಾಖೆಯ ಉತ್ಪಾದನೆಯನ್ನು ಉತ್ತೇಜಿಸಲು ಸಂಪುಟ ದರ್ಜೆ ಸಚಿವರು ಮುಖ್ಯ ಕಡತಗಳನ್ನು ರಾಜ್ಯ ಖಾತೆ ಸಚಿವರ ಬಳಿಯೂ ಹಂಚಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ.

ADVERTISEMENT

ಸಂಸದೀಯ ಕಲಾಪಗಳು ನಡೆಯುವ ಹೊತ್ತಲ್ಲಿ ಸಚಿವರು ಹೊರದೇಶಗಳಿಗೆ ತೆರಳುವ ಯಾವುದೇ ಕಾರ್ಯಕ್ರಮಗಳನ್ನು ನಿಗದಿಮಾಡಿಕೊಳ್ಳಬಾರದು ಎಂದು ಮೋದಿ ಸೂಚನೆ ನೀಡಿದ್ದಾರೆ ಎಂದು ಆಂಗ್ಲ ವೆಬ್‌ಸೈಟ್‌ india.com ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.