ADVERTISEMENT

ಎಎಎಪಿ ಶಾಸಕ ಬಲದೇವ್‌ ಸಿಂಗ್‌ ರಾಜೀನಾಮೆ

ಪಿಟಿಐ
Published 16 ಜನವರಿ 2019, 15:19 IST
Last Updated 16 ಜನವರಿ 2019, 15:19 IST

ಚಂಡೀಗಡ: ಆಮ್‌ ಆದ್ಮಿ ಪಕ್ಷದ ಶಾಸಕ ಬಲದೇವ್‌ ಸಿಂಗ್‌ ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ‘ಸರ್ವಾಧಿಕಾರಿ ಮತ್ತು ಸೊಕ್ಕಿನ ನಾಯಕ’ ಎಂದು ಅವರು ಆರೋಪಿಸಿದ್ದಾರೆ.

‘ರಾಜೀನಾಮೆ ನೀಡಲು ನೋವಾಗುತ್ತಿದೆ. ಆದರೆ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಗಾಳಿಗೆ ತೂರಲಾಗಿದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ನಿಮ್ಮ ದ್ವಿಮುಖ ನೀತಿ, ಸೊಕ್ಕು ಮತ್ತು ನಿರಂಕುಶ ಕಾರ್ಯವೈಖರಿಯಿಂದಾಗಿ ಪಕ್ಷದ ಬೆಳವಣಿಗೆಗೆ ಕಾರಣವಾದ ಹಲವರು ಪಕ್ಷ ತೊರೆಯುವಂತಾಯಿತು. ಇನ್ನು ಕೆಲವರನ್ನು ಅಮಾನವೀಯ ವರ್ತನೆಯಿಂದ ಪಕ್ಷದಿಂದ ಹೊರಗಟ್ಟಲಾಗಿದೆ’ ಎಂದು ಅವರು ಕೇಜ್ರಿವಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಎಪಿ ಶಾಸಕ ಸುಖ್‌ಪಾಲ್‌ ಸಿಂಗ್‌ ಖೈರಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕೆ ಬಲದೇವ್‌ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜ.6ರಂದು ಆಮ್ ಆದ್ಮಿ ಪಕ್ಷದ ಶಾಸಕ ಸುಖ್‌ಪಾಲ್‌ ಸಿಂಗ್‌ ಖೈರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.