ADVERTISEMENT

RSS ಕಚೇರಿ ಪುನರ್‌ನಿರ್ಮಾಣ: ಆಧುನಿಕ ತಂತ್ರಜ್ಞಾನದ 13 ಅಂತಸ್ತಿನ 3 ಕಟ್ಟಡ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 15:51 IST
Last Updated 12 ಫೆಬ್ರುವರಿ 2025, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ರಾಷ್ಟ್ರ ರಾಜಧಾನಿಯಲ್ಲಿ ಈ ಹಿಂದಿದ್ದ ತನ್ನ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಿದೆ.

3.75 ಎಕರೆ ಜಾಗದಲ್ಲಿ ತಲಾ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, 300 ಕೊಠಡಿಗಳನ್ನು ಒಳಗೊಂಡಿವೆ.

ADVERTISEMENT

ಹಿಂದುತ್ವದ ಬಗ್ಗೆ ಒಲವು ಹೊಂದಿರುವ 75 ಸಾವಿರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಲಾದ ₹150 ಕೋಟಿ ದೇಣಿಗೆ ಮೊತ್ತದಲ್ಲಿ, ಎಂಟು ವರ್ಷದ ಅವಧಿಯಲ್ಲಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಕೋವಿಡ್‌–19 ಪಿಡುಗಿನಿಂದ ನಿರ್ಮಾಣ ವಿಳಂಬವಾಯಿತು ಎಂದು ಮೂಲಗಳು ತಿಳಿಸಿವೆ.

ದೆಹಲಿ ಘಟಕವು ಫೆ. 19ರಂದು ಸಂಘಟಿಸಿರುವ ‘ಕಾರ್ಯಕರ್ತರ ಸಮ್ಮೇಳನ’ದಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತೀಯ ಪ್ರತಿನಿಧಿ ಸಭಾ ಮಾರ್ಚ್‌ 21ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.