
ನವದೆಹಲಿ: ದೆಹಲಿ ಕೆಂಪುಕೋಟೆ ಬಳಿ ನಡೆದಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಮೂವರು ವೈದ್ಯರು, ಒಬ್ಬ ಮೌಲ್ವಿ ಸೇರಿದಂತೆ ಐವರು ಆರೋಪಿಗಳ ಎನ್‌ಐಎ ಕಸ್ಟಡಿ ಅವಧಿಯನ್ನು ಜನವರಿ 16ರವರೆಗೆ ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ.
ಡಾ.ಆದಿಲ್ ರಾಥರ್, ಡಾ.ಶಾಹೀನ್ ಸಯೀದ್, ಡಾ. ಮುಜಮ್ಮಿಲ್ ಗನಿ, ಮೌಲ್ವಿ ಇರ್ಫಾನ್ ಅಹಮದ್ ವಾಗೆ ಮತ್ತು ಜಾಸಿರ್ ಬಿಲಾಲ್ ವಾನಿ ಅವರ ಕಸ್ಟಡಿ ಅವಧಿಯನ್ನು ವಿಸ್ತರಿಸಬೇಕು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಾಡಿದ್ದ ಮನವಿಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅಂಜು ಬಜಾಜ್ ಚಾಂದನಾ ಅವರು ಪುರಸ್ಕರಿಸಿದ್ದಾರೆ.
ಪ್ರಕರಣದ ಹಿಂದಿನ ದೊಡ್ಡ ಪಿತೂರಿಯನ್ನು ಮತ್ತು ಸಂಬಂಧಿಸಿದ ಇತರ ವ್ಯಕ್ತಿಗಳನ್ನು ಸೆರೆ ಹಿಡಿಯಲು ಆರೋಪಿಗಳ ಹೆಚ್ಚುವರಿ ವಿಚಾರಣೆ ಅಗತ್ಯವಾಗಿದೆ ಎಂದು ಎನ್ಐಎ ಮನವಿ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 9 ಮಂದಿಯನ್ನು ಎನ್‌ಐಎ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.