ADVERTISEMENT

ಚೀನಾಕ್ಕೆ ಕಳ್ಳಸಾಗಣೆ ಯತ್ನ: ₹6 ಕೋಟಿ ಮೌಲ್ಯದ ರಕ್ತಚಂದನ ವಶ

ಚೀನಾಕ್ಕೆ ಕಳ್ಳಸಾಗಣೆ ಮಾಡಲು ಮುಂದಾಗಿದ್ದ ಆರೋಪಿಗಳು

ಪಿಟಿಐ
Published 7 ಅಕ್ಟೋಬರ್ 2025, 13:17 IST
Last Updated 7 ಅಕ್ಟೋಬರ್ 2025, 13:17 IST
<div class="paragraphs"><p>ದೆಹಲಿ ಪೊಲೀಸರು ₹6 ಕೋಟಿ ಮೌಲ್ಯದ 10 ಟನ್‌ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ</p></div>

ದೆಹಲಿ ಪೊಲೀಸರು ₹6 ಕೋಟಿ ಮೌಲ್ಯದ 10 ಟನ್‌ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ

   

–ಪಿಟಿಐ ಚಿತ್ರ

ನವದೆಹಲಿ: ದೆಹಲಿ ಪೊಲೀಸ್‌ ವಿಶೇಷ ಕಾರ್ಯ ಪಡೆ ಅಧಿಕಾರಿಗಳು ₹6 ಕೋಟಿ ಮೌಲ್ಯದ 10 ಟನ್‌ ರಕ್ತಚಂದನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಹೈದರಾಬಾದ್‌ನ ಇರ್ಫಾನ್‌, ಮುಂಬೈನ ಠಾಣೆಯ ಅಮಿತ್‌ ಸಂಪತ್‌ ಪವಾರ್‌ ಬಂಧಿತರು. ಆರೋಪಿಗಳು ಚೀನಾ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ದೆಹಲಿ ಮೂಲಕ ರಕ್ತಚಂದನವನ್ನು ಅಕ್ರಮ ಸಾಗಣೆ ಮಾಡಲು ಮುಂದಾಗಿದ್ದರು ಎಂದು ಡಿಸಿಪಿ (ಆಗ್ನೇಯ) ಹೇಮಂತ್‌ ತಿವಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಂಧ್ರಪ್ರದೇಶದ ತಿರುಪತಿಯಲ್ಲಿ ರಕ್ತಚಂದನದ ತುಂಡುಗಳ ಕಳವು ಸಂಬಂಧ ಆಗಸ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಕೆಲ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ರಕ್ತಚಂದನದ ತುಂಡುಗಳನ್ನು ದೆಹಲಿಯ ತುಘಲಕಾಬಾದ್‌ನ ಗೋದಾಮಿನಲ್ಲಿ ಇಟ್ಟಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು. ಈ ಮಾಹಿತಿ ಆಧರಿಸಿ, ಆಂಧ್ರಪ್ರದೇಶ ಗುಪ್ತಚರ ಅಧಿಕಾರಿಗಳ ಜತೆಗೂಡಿ ಗೋದಾಮಿನ ಮೇಲೆ ದಾಳಿ ನಡೆಸಿ, ಸುಮಾರು 9,500 ಕೆ.ಜಿ. ರಕ್ತಚಂದನವನ್ನು ವಶಪಡಿಸಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.