ADVERTISEMENT

ಜನಗಣತಿ: ಅಧಿಕಾರಿಗಳನ್ನು ನೇಮಿಸಲು ನಿರ್ದೇಶನ

ಪಿಟಿಐ
Published 9 ಡಿಸೆಂಬರ್ 2025, 16:15 IST
Last Updated 9 ಡಿಸೆಂಬರ್ 2025, 16:15 IST
.. 
..    

ನವದೆಹಲಿ: ಜನಗಣತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಅಗತ್ಯವಾಗಿರುವ ಅಧಿಕಾರಿಗಳ ನೇಮಕಾತಿಯನ್ನು ಜನವರಿ 15ರೊಳಗಾಗಿ ಪೂರ್ಣಗೊಳಿಸುವಂತೆ ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯವು(ಆರ್‌ಜಿಐ) ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. 

ಗಣತಿದಾರರು ಮತ್ತು ಮೇಲ್ವಿಚಾರಕರು ಜನಗಣತಿಯಲ್ಲಿ ಪ್ರಾಥಮಿಕ ಕಾರ್ಯವಾದ ದತ್ತಾಂಶ ಸಂಗ್ರಹಣೆಯನ್ನು ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಒಬ್ಬ ಗಣತಿದಾರರಿಗೆ 700ರಿಂದ–800 ಜನರ ಗಣತಿಯ ಕಾರ್ಯ ನೀಡಲಾಗುವುದು. ಪ್ರತಿ ಆರು ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಿರುತ್ತಾರೆ.  ಶಿಕ್ಷಕರು, ಕ್ಲರ್ಕ್‌ ಅಥವಾ ರಾಜ್ಯ ಸರ್ಕಾರದ‌ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳನ್ನು ಗಣತಿದಾರರಾಗಿ ನೇಮಿಸಬಹುದು. ಗಣತಿದಾರರಿಗಿಂತ ಮೇಲ್ದರ್ಜೆಯ ಅಧಿಕಾರಿಗಳನ್ನು ಮೇಲ್ವಿಚಾರಕರಾಗಿ ನೇಮಿಸಬಹುದು’ ಎಂದು ಆರ್‌ಜಿಐ ತಿಳಿಸಿದೆ. 

ADVERTISEMENT

‘ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ನಾಮನಿರ್ದೇಶಿತ ಅಧಿಕಾರಿಗಳು ಪ್ರಧಾನಿ ಗಣತಿ ಅಧಿಕಾರಿಯಾಗಿರುತ್ತಾರೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.