ADVERTISEMENT

ಬಹುಕಾಲದ ಗೆಳತಿಯನ್ನು ವರಿಸಲಿರುವ ರೆಹನ್ ವಾದ್ರಾ: ಪ್ರಿಯಾಂಕಾ ಭಾವಿ ಸೊಸೆ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಡಿಸೆಂಬರ್ 2025, 12:12 IST
Last Updated 30 ಡಿಸೆಂಬರ್ 2025, 12:12 IST
<div class="paragraphs"><p>ರಿಹನ್ ವಾದ್ರ–ಅವಿವಾ ಬೇಗ್</p></div>

ರಿಹನ್ ವಾದ್ರ–ಅವಿವಾ ಬೇಗ್

   

ಚಿತ್ರ: @MumbaichaDon


ADVERTISEMENT

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹನ್ ವಾದ್ರಾ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದು, ಇವರ ಪ್ರೀತಿಗೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ, ರೆಹನ್ ಮತ್ತು ಅವಿವಾ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಅದಕ್ಕೆ ಅವರೂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಾರು ಅವಿವಾ ಬೇಗ್?

ಅವಿವಾ ಅವರು ಇಮ್ರಾನ್ ಬೇಗ್ ಹಾಗೂ ನಂದಿತಾ ಬೇಗ್ ದಂಪತಿಯ ಮಗಳು. ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಆರಂಭಿಕ ಶಿಕ್ಷಣವನ್ನು ದೆಹಲಿಯಲ್ಲೇ ಪೂರ್ಣಗೊಳಿಸಿದ್ದಾರೆ.

ರೆಹನ್ ವಾದ್ರಾ ಅವರಂತೆ ಅವಿವಾ ಕೂಡ ಸೃಜನಶೀಲ ಕಲೆಗಳಲ್ಲಿ ವೃತ್ತಿಜೀವನ ರೂಪಿಸಿಕೊಂಡಿದ್ದಾರೆ. ರಾಜಕೀಯ ಪ್ರಚಾರದಿಂದ ಇವರು ದೂರ ಉಳಿದಿರುವ ಇವರು, ದೆಹಲಿ ಮೂಲದ ಛಾಯಾಗ್ರಾಹಕಿ. ಮಾತ್ರವಲ್ಲ, ಛಾಯಾಗ್ರಹಣ ಸ್ಟುಡಿಯೋ ಮತ್ತು ನಿರ್ಮಾಣ ಕಂಪನಿಯಾಗಿರುವ ಅಟೆಲಿಯರ್ 11ರ ಸಹ ಸಂಸ್ಥಾಪಕಿ ಕೂಡ.

ಅವಿವಾ ಪ್ರಸ್ತುತ ವೃತ್ತಿಪರ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ ಮಾತ್ರವಲ್ಲ, ಅವರು ಫುಟ್‌ಬಾಲ್ ಆಟಗಾರ್ತಿ ಕೂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.