ADVERTISEMENT

ಮೋದಿ ವಿರುದ್ಧ ಹಿಂಸಾಚಾರ ಪ್ರಚೋದಿಸುವ ಹೇಳಿಕೆ ನೀಡಲಾಗುತ್ತಿದೆ: ಬಿಜೆಪಿ ಆರೋಪ

ವಿಪಕ್ಷಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಬಿಜೆಪಿ

ಪಿಟಿಐ
Published 18 ಜುಲೈ 2024, 15:56 IST
Last Updated 18 ಜುಲೈ 2024, 15:56 IST
ಬಿಜೆಪಿ
ಬಿಜೆಪಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವಂತಹ ಹೇಳಿಕೆಗಳನ್ನು ವಿರೋಧ ಪಕ್ಷಗಳು ಆಗಾಗ್ಗೆ ನೀಡುತ್ತಿವೆ ಎಂದು ಬಿಜೆಪಿ ಗುರುವಾರ ಆರೋಪ ಮಾಡಿದೆ. 

ರಾಜಕೀಯ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಭಾಷಣಗಳಲ್ಲಿ ‘ಸಾವು’ ಮತ್ತು ‘ಹಿಂಸಾ’ ಪದಗಳನ್ನು ಬಳಸಬಾರದು ಎಂದೂ ಅದು ಹೇಳಿದೆ.

‘ಇಂತಹ ಪ್ರಚೋದನಕಾರಿ ಪದಗಳ ಬಳಕೆಯು ಸಮಾಜದಲ್ಲಿ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಹಿಂಸೆಯನ್ನು ಉತ್ತೇಜಿಸುತ್ತದೆ ಮತ್ತು ಅನಗತ್ಯ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ವಿಪಕ್ಷಗಳು ತಮ್ಮ ರಾಜಕೀಯ ಭಾಷಣದಲ್ಲಿ ಸಭ್ಯತೆ ಮತ್ತು ಗಂಭೀರತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ADVERTISEMENT

‘ಸಾರ್ವಜನಿಕ ಬದುಕಿನಲ್ಲಿ ಮಾತನಾಡುವಾಗ ಪದಗಳ ಆಯ್ಕೆಯು ಬಹಳ ಮುಖ್ಯ. ಪ್ರಧಾನಿ ಮೋದಿಯವರ ಕುರಿತು ವಿರೋಧ ಪಕ್ಷಗಳು ಬಳಸುತ್ತಿರುವ ಹೇಳಿಕೆಗಳ ರೀತಿ ತೀವ್ರ ಕಳವಳಕಾರಿಯಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.